ಬೆಂಗಳೂರು: ರಜತ್ ವಿಚಾರಣೆಗೆ ಹಾಜರಾಗದೆ, ಮುಂಚಿತ ಅರ್ಜಿಯನ್ನೂ ಸಲ್ಲಿಸದೆ ಇರುವ ಕಾರಣ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಇದೇ ಕಾರಣಕ್ಕೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನ ಅರೆಸ್ಟ್ ಮಾಡಿದ್ದಾರೆ. ನಿನ್ನೆಯೇ ಅವರನ್ನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ರಜತ್‌ಗೆ ಏಪ್ರಿಲ್ 29ರ ವರೆಗೆ ನ್ಯಾಯಾಲಯ ಬಂಧನ ವಿಧಿಸಿತ್ತು. ಇದೀಗ ನಗರದ 24ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿ ರಜತ್ ಕಿಶನ್ಗೆ ರಿಲೀಫ್ ನೀಡಿದೆ.
ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು..! ಏನಾಗುತ್ತೆ ಗೊತ್ತಾ..?
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರನ್ನು ಪೊಲೀಸರು ನಿನ್ನೆ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್ ರಜತ್ ಕಿಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದರ ಬೆನ್ನಲ್ಲೇ ರಜತ್ ಕಿಶನ್ ಅವರಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ.
ಈ ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್‌ಗೆ ಮಾತ್ರ ವಾರೆಂಟ್ ಇತ್ತು. ವಿನಯ್‌ಗೌಡಗೆ ವಾರೆಂಟ್ ಇರಲಿಲ್ಲ. ಹೀಗಾಗಿ ವಿನಯ್ ಗೌಡ ಅವರಿಗೆ ನಿನ್ನೆಯೇ ರಿಲೀಫ್ ಸಿಕ್ಕಿತ್ತು. ರಜತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ರಜತ್ ಪರ ವಕೀಲರು ಕೋರ್ಟ್ಗೆ ನಿನ್ನೆಯೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ಮಾಡಿ ಆದೇಶ ಇಂದಿಗೆ ಕಾಯ್ದಿರಿಸಿತ್ತು. ಅದರಂತೆ 24ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ.