ಬೆಂಗಳೂರು: ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಾಲಿವುಡ್ ಗಾಯಕ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ.
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ನಿಮಗೆ ಅನಾರೋಗ್ಯ ಕಾಡುತ್ತೆ..! ಇದನ್ನು ನೀವೂ ನಂಬಲೆಬೇಕು
ಪೋಸ್ಟ್ ಮೂಲಕ ಹೇಳಿಕೆಯನ್ನ ಕಳಿಸಲು ಅವಕಾಶ ನೀಡಬೇಕು ಎಂದು ಸೋನು ನಿಗಮ್ ಪರ ವಕೀಲ ಮನವಿ ಮಾಡಿದ್ದು, ಹೈಕೋರ್ಟ್ ನ್ಯಾಯಾಧೀಶರು ಸೋನು ನಿಗಮ್ ವೆಚ್ಚದಲ್ಲಿ ಅವರಿದ್ದ ಸ್ಥಳದಲ್ಲಿ ತನಿಖೆ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆ ನಡೆಸಲು ಸೂಚನೆ ನೀಡಿದರು.
ಹೈಕೋರ್ಟ್ ಅನುಮತಿ ಪಡೆಯದೆ ದೋಷಾರೋಪ ಪಟ್ಟಿ ಸಲ್ಲಿಸಬಾರದು. ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ಹೊರಡಿಸಿತು.