ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ದರ ದಿಢೀರ್ ಏರಿಕೆ ಆಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು 10 ಗ್ರಾಂಗೆ 2,000 ರೂಪಾಯಿ ಏರಿಕೆ ಕಂಡಿದೆ.
ಪತಿ ವಾಟ್ಸಪ್ ಖಾತೆ ಹ್ಯಾಕ್ ಮಾಡಿದ ಹೆಂಡ್ತಿ: ಪರ ಸ್ತ್ರೀಯರೊಂದಿಗೆ ರಾಸಲೀಲೆ ನೋಡಿ ಶಾಕ್!
ಈ ಬಗ್ಗೆ ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾತನಾಡಿ, ಎರಡು ತಿಂಗಳಲ್ಲೇ 2ನೇ ಬಾರಿಗೆ ಚಿನ್ನದ ಬೆಲೆ ಗರಿಷ್ಠ ಏರಿಕೆ ಕಾಣುತ್ತಿರುವುದು ಗ್ರಾಹಕರಿಗೆ ಆಶ್ಚರ್ಯ ಮೂಡಿಸಿದೆ. ಕಳೆದ ಫೆಬ್ರುವರಿ 10 ರಂದು 10 ಗ್ರಾಂಗೆ 2400 ರೂಪಾಯಿ ಹೆಚ್ಚಳವಾಗಿದ್ದ ಚಿನ್ನ, ಇದೀಗ 2000 ರೂಪಾಯಿ ಏರಿಕೆ ಆಗಿದೆ ಎಂದರು.
ಸದ್ಯ 10 ಗ್ರಾಂ ಚಿನ್ನದ ಬೆಲೆ 94,150 ರೂಪಾಯಿ ಆಗಿದೆ. ಮಾರ್ಚ್ 28 ಶುಕ್ರವಾರದಂದು ಶೇಕಡಾ 99.9 ರಷ್ಟು ಶುದ್ಧತೆಯ ಬಂಗಾರ 10 ಗ್ರಾಂಗೆ 92,150 ರೂಪಾಯಿ ಇತ್ತು. ಆದರೆ ಈಗ 2000 ರೂಪಾಯಿ ಹೆಚ್ಚಳ ಆಗಿದ್ದರಿಂದ 94,150 ರೂಪಾಯಿ ಆಗಿದೆ. ಈ ಬೆಲೆಯೂ ಇನ್ನು ಅಧಿಕ ಆಗಬಹುದು ಎಂದು ಹೇಳಲಾಗುತ್ತಿದೆ.