Close Menu
Ain Live News
    Facebook X (Twitter) Instagram YouTube
    Saturday, May 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ರಾಜಧಾನಿಯಲ್ಲಿ ಹೊಸ ರೂಲ್ಸ್!

    By AIN AuthorMarch 1, 2025
    Share
    Facebook Twitter LinkedIn Pinterest Email
    Demo

    ನವದೆಹಲಿ:- ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಗಾಡಿ ಸೀಜ್ ಮಾಡಿ ದಂಡ ಕಟ್ಟೋದನ್ನ ನೋಡಿದ್ದೀವಿ. ಆದ್ರೆ ಇಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ಗಾಡಿ ಸೀಜ್ ಹಾಗುತ್ತಂತೆ.

    Champions Trophy: ಇಂಗ್ಲೆಂಡ್‌ ಮಣಿಸಿ ಸೆಮಿಫೈನಲ್‌ಗೆ ದಕ್ಷಿಣ ಆಫ್ರಿಕಾ ಎಂಟ್ರಿ!

    ಹೌದು, ನಮ್ಮಲ್ಲಿ ಇತ್ತೀಚಿಗಂತೂ ವಾಯು ಮಾಲಿನ್ಯ (Air Pollution) ವಿಕೋಪಕ್ಕೆ ತಿರುಗಿದೆ. ಎಲ್ಲೆಡೆ ಮಿತಿಮೀರಿದ ವಾಹನಗಳ ಸಂಚಾರ, ಅತೀಯಾದ ಪ್ಲಾಸ್ಟಿಕ್‌ ಬಳಕೆ ಹಾಗೂ ಕಾಡು ನಾಶ ಇವುಗಳಿಂದ ಶುದ್ಧ ವಾತಾವರಣವೇ ಇಲ್ಲದಂತಾಗಿದೆ. ಆದ್ದರಿಂದ ಶುದ್ಧ ಗಾಳಿಗಾಗಿ ಜನರು ಪರಿತಪಿಸುವಂತಾಗಿದೆ. ಈ ರೀತಿಯ ಮಾಲಿನ್ಯದ ಗಾಳಿಗೆ ನಾವು ಒಳಗಾಗುತ್ತಿದ್ದೇವೆ. ಒಟ್ಟಿನಲ್ಲಿ ಶುದ್ಧ ಗಾಳಿಯ ಕೊರತೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಇನ್ನೂ ದೆಹಲಿಯಲ್ಲಂತೂ ಕೆಲವರ್ಷಗಳಿಂದ ವಾಯು ಮಾಲಿನ್ಯವನ್ನು ನಿಯಂತ್ರಣವೇ ಮಾಡಲಾಗುತ್ತಿಲ್ಲ.

    ಇದೀಗ ವಾಯು ಮಾಲಿನ್ಯವನ್ನು ಎದುರಿಸಲು ದೆಹಲಿ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್‌, ಡೀಸೆಲ್‌ ನೀಡುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್‌ ಸಿಂಗ್‌ ಸಿರ್ಸಾ ಶನಿವಾರ ಪ್ರಕಟಿಸಿದ್ದಾರೆ. ಇದು ವಾಹನ ಸವಾರರಿಗೆ ಸಂಕಷ್ಟ ತಂದಿದೆ.

    ಮಾರ್ಚ್ 31 ರ ನಂತರ ಈ ನಿಯಮ ಜಾರಿಗೆ ಬರಲಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರದಾದ್ಯಂತ ಪೆಟ್ರೋಲ್‌ ಬಂಕ್‌ಗಳಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ಸರ್ಕಾರ ನಿಲ್ಲಿಸಲಿದೆ ಎಂದರು.

    ಪೆಟ್ರೋಲ್ ಬಂಕ್‌ಗಳಲ್ಲಿ ಹಳೆಯ ವಾಹನಗಳಿಗೆ ಇಂಧನ ತುಂಬಿಸುವಂತಿಲ್ಲ. ಹಳೆಯ ವಾಹನಗಳನ್ನು ಗುರುತಿಸಲು ವಿಶೇಷ ತಂಡ ರಚನೆ ಮಾಡಲಾಗುವುದು. ಮಾಲಿನ್ಯ ನಿಯಂತ್ರಣಕ್ಕೆ ಹೋಟೆಲ್‌ಗಳಲ್ಲಿ ಹೊಗೆ ನಿರೋಧಕ ಅಳವಡಿಕೆ ಕಡ್ಡಾಯ ಎಂದು ಹೇಳಿದ್ದಾರೆ.

    2025 ರ ಡಿಸೆಂಬರ್‌ ವೇಳೆಗೆ ದೆಹಲಿಯಲ್ಲಿ ಸುಮಾರು ಶೇ.90 ರಷ್ಟು ಸಾರ್ವಜನಿಕ ಸಿಎನ್‌ಜಿ ಬಸ್‌ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು. ಸ್ವಚ್ಛ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಯತ್ತ ಸರ್ಕಾರದ ಒತ್ತು ನೀಡುವ ಭಾಗವಾಗಿ ಎಲೆಕ್ಟ್ರಿಕ್‌ ಬಸ್‌ಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಮದ್ಯಪ್ರಿಯರ ಗಮನಕ್ಕೆ: ಮೇ 29 ರಿಂದ ಮದ್ಯದಂಗಡಿ ಕ್ಲೋಸ್!? ಯಾಕೆ?

    May 24, 2025

    ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ದುರ್ಮರಣ, ಓರ್ವ ಗಂಭೀರ!

    May 24, 2025

    ಭೀಕರ ಅಪಘಾತ​: ಕಲ್ಲು ತುಂಬಿದ್ದ ಟ್ರಕ್ ಪಲ್ಟಿ, ಲಾರಿ ಚಾಲಕ ಸಾವು!

    May 24, 2025

    ಇಂದು ಸಿಇಟಿ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡೋದು ಹೇಗೆ!? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    May 24, 2025

    Rape Case: ಬೆಳಗಾವಿ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್!

    May 24, 2025

    ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ! ಬೆಸ್ಕಾಂಗೆ ಭಾರೀ ನಷ್ಟ!

    May 24, 2025

    ಕರುನಾಡಿಗೆ ಕೋವಿಡ್ ಭೀತಿ: ಬೆಂಗಳೂರಿನಲ್ಲಿ 32 ಕೇಸ್ ದಾಖಲು!

    May 23, 2025

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ದುಡ್ಡು ವಿಚಾರ: BMRCL ಕೊಟ್ಟ ಸ್ಪಷ್ಟನೆ ಇಲ್ಲಿದೆ!

    May 23, 2025

    ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ವಿಡಿಯೋ ತೆಗೆದು ಅಪ್ಲೋಡ್ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್!

    May 23, 2025

    ಚಿಪ್ಸ್ ಕದ್ದ ಆರೋಪ: ಮನನೊಂದು ಸೂಸೈಡ್ ಮಾಡಿಕೊಂಡ 13ರ ಬಾಲಕ!

    May 23, 2025

    ಪ್ರಹ್ಲಾದ್ ಜೋಶಿಯವರಿಗೆ ಧೈರ್ಯ ಇಲ್ವಾ!? ಎಂಬಿ ಪಾಟೀಲ್ ಹಿಂಗೇಳಿದ್ಯಾಕೆ?

    May 23, 2025

    ನ್ಯಾಷನಲ್ ಹೆರಾಲ್ಡ್ ED ಚಾರ್ಜ್‌ಶೀಟ್:‌ ಎಲ್ಲಾ ತನಿಖೆಗೂ ಸಿದ್ಧ ಎಂದ ಡಿಕೆಶಿ

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.