ಬೆಂಗಳೂರು\ ನವದೆಹಲಿ:- ಕೇಂದ್ರ ಸರ್ಕಾರವು ಓಲಾ, ಊಬರ್ ಕ್ಯಾಬ್ ಚಾಲಕರಿಗೆ ಬಿಗ್ ಶಾಕ್ ಕೊಟ್ಟಿದೆ. ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಹಕಾರ್ ಟ್ಯಾಕ್ಸಿ ಎಂಬ ಹೊಸ ಆಪ್ ತರುತ್ತಿದೆ. ಈ ಆಪ್ ಓಲಾ, ಊಬರ್ ಮಾದರಿಯಲ್ಲೇ ರೈಡ್ ಸರ್ವೀಸ್ ನೀಡಲಿದೆ.
Crime News: ಸಿಲಿಕಾನ್ ಸಿಟಿಯಲ್ಲಿ ಭೀಕರ ಹತ್ಯೆ- ಪತ್ನಿ ಕೊಂದು ದೇಹ ಕತ್ತರಿಸಿ ಸೂಟ್ ಕೇಸ್ ಗೆ ತುಂಬಿದ ಪತಿ!
ಓಲಾ, ಊಬರ್ ಮಾದರಿಯಲ್ಲಿ ಚಾಲಕರಿಂದ ಯಾವುದೇ ಶುಲ್ಕವನ್ನು ಸಂಗ್ರಹ ಮಾಡಲ್ಲ. ರೈಡ್ನ ಎಲ್ಲಾ ಮೊತ್ತ ಚಾಲಕರಿಗೆ ವರ್ಗ ಮಾಡಲಾಗುತ್ತದೆ. ಶೀಘ್ರದಲ್ಲೇ ಸಹಕಾರ್ ಟ್ಯಾಕ್ಸಿ ಆಪ್ ಲೋಕಾರ್ಪಣೆ ಮಾಡ್ತೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಓಲಾ ಮತ್ತು ಊಬರ್ ಪ್ಲಾಟ್ಫಾರ್ಮ್ಗಳಲ್ಲಿ ಒಂದು ರೇಡ್ನಲ್ಲಿ ಗ್ರಾಹಕರಿಂದ ಪಡೆಯಲಾಗುವ ಹಣದಲ್ಲಿ ಕಂಪನಿಗಳಿಗೆ ಸಾಕಷ್ಟು ಹಣ ಹೋಗುತ್ತದೆ. ಬಹಳಷ್ಟು ಚಾಲಕರು ಈ ಬಗ್ಗೆ ನಿತ್ಯವೂ ಅಳಲು ತೋಡಿಕೊಳ್ಳುವುದಿದೆ. ಆದರೆ, ಸರ್ಕಾರ ಯೋಜಿಸಿರುವ ಸಹಕಾರಿ ಟ್ಯಾಕ್ಸಿಯು ಲಾಭ ರಹಿತ ಉದ್ದೇಶದಿಂದ ನಡೆಸಲಾಗುತ್ತದೆ. ಒಂದು ರೇಡ್ನ್ಲಲಿ ಸಿಗುವ ಎಲ್ಲಾ ಹಣವೂ ನೇರವಾಗಿ ಚಾಲಕರಿಗೆ ಹೋಗುತ್ತದೆ.