ಪ್ರಸ್ತುತ ಜನರು ಆನ್‌ಲೈನ್ ಸೇವೆಗಳತ್ತ ಹೆಚ್ಚಾಗಿ ವಾಲುತ್ತಿದ್ದು, ಆ ಪೈಕಿ ಬಳಕೆದಾರರ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಮ್ ಆ್ಯಪ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಟೀ ಸ್ಟಾಲ್, ತರಕಾರಿ ಅಂಗಡಿ, ಕಿರಾಣಿ ಸ್ಟೋರ್, ಸೂಪರ್ ಮಾರ್ಕೆಟ್ ಸೇರಿದಂತೆ ಶೋ ರೂಮ್/ಮಾಲ್‌ಗಳಲ್ಲಿಯೂ ಗೂಗಲ್ ಪೇ, ಫೋನ್ ಪೇ UPI ಆ್ಯಪ್‌ಗಳನ್ನು ಬಳಕೆ ಮಾಡಿ ಬಿಲ್ ಪಾವತಿಸುವುದು ಸಾಮಾನ್ಯವಾಗಿದೆ. ಈ ಆ್ಯಪ್‌ಗಳ ಬಳಕೆ ಸರಳ ಮತ್ತು ಸುರಕ್ಷಿತವು ಆಗಿವೆ.
ಆನ್‌ಲೈನ್ ಪೇಮೆಂಟ್ ಹೆಚ್ಚಾದ ಹಿನ್ನೆಲೆ ಈಗ ಯಾರೂ ಹೆಚ್ಚು ನಗದನ್ನು ಬಳಸುವುದಿಲ್ಲ. ನಗದಿಗಿಂತ ಕಾರ್ಡ್ ವಹಿವಾಟಿಗೆ ಆದ್ಯತೆ ನೀಡುತ್ತಿದ್ದ ಕಾಲವೊಂದಿತ್ತು. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿನಿಂದ ಕಾರ್ಡ್ ಅಗತ್ಯವೇ ಇಲ್ಲವೆಂಬಂತಾಗಿದೆ. ಯಾವುದನ್ನೂ ಖರೀದಿಸಬೇಕಾದ್ರೂ, ಯುಪಿಐ ವಿಧಾನ ಎಲ್ಲರಿಗೂ ಸುಲಭವಾಗಿದೆ. ಆದ್ರೆ ಇದೀಗ ಯುಪಿಐ ಹೊಸ ನಿರ್ಧಾರಗಳನ್ನು ಕೈಗೊಂಡಿದೆ.
ನೀವು Google Pay, PhonePe ಅಥವಾ Paytm ನಂತಹ UPI ಪೇಮೆಂಟ್ ಆ್ಯಪ್‌ಗಳನ್ನ ಬಳಸ್ತೀರಾ? ಹಾಗಿದ್ರೆ, ಇದು ನೀವು ತಿಳಿಯಲೇ ಬೇಕಾದ ಮಾಹಿತಿ. ಏಪ್ರಿಲ್ 1, 2025 ರಿಂದ, ಈ ಅಪ್ಲಿಕೇಶನ್‌ಗಳು ಕೆಲವು ಮೊಬೈಲ್ ನಂಬರ್‌ಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು. NPCI ದ ಇತ್ತೀಚಿನ ಮಾರ್ಗಸೂಚಿಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.
ಏಪ್ರಿಲ್ 1 ರಿಂದ ಬ್ಯಾಂಕ್ ಖಾತೆಗೆ ಲಿಂಕ್ ಆಗದ ಅಥವಾ ಬದಲಾಯಿಸಲಾದ ಮೊಬೈಲ್ ಸಂಖ್ಯೆಗಳೊಂದಿಗೆ UPI ಸೇವೆಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಮುಖ್ಯ ಕಾರಣಗಳು: ಹಳೆಯ, ನಿಷ್ಕ್ರಿಯ ಸಂಖ್ಯೆಗಳನ್ನು ತೆಗೆದುಹಾಕುವುದು. ಬ್ಯಾಂಕ್ ಖಾತೆಗೆ ಲಿಂಕ್ ಮಾಡದ ಸಂಖ್ಯೆಗಳನ್ನು ಬ್ಲಾಕ್ ಮಾಡುವುದು.ಸೈಬರ್ ವಂಚನೆಯನ್ನು ತಡೆಗಟ್ಟಲು NPCI ಹೊಸ ಭದ್ರತಾ ಕ್ರಮಗಳು. KYC ಅಪ್ಡೇಟ್ ಮಾಡದ ಬಳಕೆದಾರರಿಗೆ ಕಾರ್ಯನಿರ್ವಹಿಸಲ್ಲ.
ಹಾಗಿದ್ರೆ ನಿಮ್ಮ ಯುಪಿಐ ಆ್ಯಪ್‌ಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬೇಕೆಂದರೆ, ಈ ಹಂತಗಳನ್ನು ಫಾಲೋ ಮಾಡಿ. ಮೊದಲು, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಚೆಕ್ ಮಾಡಿಕೊಳ್ಳಿ.
ಇನ್ನು ಮೊಬೈಲ್ ನಂಬರ್ ಚೇಂಜ್ ಆಗಿದ್ದರೆ, ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹೊಸ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಳ್ಳಿ. Google Pay, PhonePe, Paytm ಸೆಟ್ಟಿಂಗ್‌ಗಳಲ್ಲಿ ‘ಖಾತೆ ನಿರ್ವಹಿಸಿ’ ವಿಭಾಗದಲ್ಲಿ ಹೊಸ ಸಂಖ್ಯೆಯನ್ನು ಅಪ್ಡೇಟ್ ಮಾಡಿ. ಅಲ್ಲದೇ ಹೊಸ ಮಾರ್ಗಸೂಚಿಗಳನ್ನು ಓದಿ ಮತ್ತು NPCI ಅಧಿಕೃತ ವೆಬ್‌ಸೈಟ್ ಮೂಲಕ ಅಗತ್ಯವಿರುವ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ನಂಬರ್ ಅಪ್ಡೇಟ್ ಮಾಡದಿದ್ರೆ ಏನಾಗುತ್ತೆ? ಏಪ್ರಿಲ್ 1 ರ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗದ ಮೊಬೈಲ್ ಸಂಖ್ಯೆ ಇದ್ದರೆ, UPI ವಹಿವಾಟುಗಳು ನಿಲ್ಲುತ್ತವೆ. ಈ ಪರಿಣಾಮ Google Pay, PhonePe ಮತ್ತು Paytm ನಂತಹ ಅಪ್ಲಿಕೇಶನ್‌ಗಳನ್ನು ಬಳಸಲಾಗುವುದಿಲ್ಲ. ಇದರಿಂದ ನಿಮ್ಮ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗ್ಬಹುದು.
ಇನ್ನು ಯುಪಿಐ ಪೇಮೆಂಟ್ ಆ್ಯಪ್‌ಗಳನ್ನು ಸೇಫ್ ಆಗಿಟ್ಟುಕೊಳ್ಳುವ ಉದ್ದೇಶದಿಂದ ಎನ್‌ಪಿಸಿಐ ಈ ನಿರ್ಧಾರ ಕೈಗೊಂಡಿದೆ. ನಿಮ್ಮ ಬ್ಯಾಂಕ್ ಮತ್ತು UPI ಅಪ್ಲಿಕೇಶನ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿದ್ಯಾ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲದಿದ್ರೆ ಈಗಲೇ ಅಪ್ಡೇಟ್ ಮಾಡಿಕೊಳ್ಳಿ.