Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Bill Gates: ತಮ್ಮ ಆಸ್ತಿಯಲ್ಲಿ ಮಕ್ಕಳಿಗೆ ಕೇವಲ 1 ಪರ್ಸೆಂಟ್‌ʼಗಿಂತಲೂ ಕಡಿಮೆ ಪಾಲಿಟ್ಟ ಬಿಲ್‌ಗೇಟ್ಸ್‌..!

    By Author AINApril 19, 2025
    Share
    Facebook Twitter LinkedIn Pinterest Email
    Demo

    ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿ, ನೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ. ಆದರೆ, ಅವನೊಬ್ಬ ಸಾಮಾನ್ಯ ವ್ಯಕ್ತಿ ಮತ್ತು ತನ್ನ ಮಕ್ಕಳ ಮೇಲೆ ವ್ಯಾಮೋಹವಿಲ್ಲದ ಪ್ರೀತಿ. ಈ ಅಂಶಗಳಿಂದ ನೀವು ಊಹೆ ಮಾಡಿರಬಹುದು. ನಾವು ಹೇಳುತ್ತಿರುವುದು ತಂತ್ರಜ್ಞಾನ ದಿಗ್ಗಜ ಬಿಲ್‌ಗೇಟ್ಸ್‌ ಬಗ್ಗೆ. ಹೌದು ಐಟಿ ದಿಗ್ಗಜ ಬಿಲ್‌ಗೇಟ್ಸ್‌ ತಮ್ಮ ಮಕ್ಕಳಿಗಾಗಿ ಬಿಟ್ಟಿರುವ ಆಸ್ತಿ ಎಷ್ಟು ಎಂದು ಕೇಳಿದ್ರೆ ನೀವು ನಿಜವಾಗ್ಲು ಅಚ್ಚರಿ ಪಡುವರಿ.

    ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್‌ಗೇಟ್ಸ್‌ ಅವರ ನೆಟ್‌ವರ್ತ್‌ 101.2 ಬಿಲಿಯನ್ ಡಾಲರ್ ಹೀಗಿದ್ದರೂ ತನ್ನ ಆಸ್ತಿಯಲ್ಲಿ, ಶ್ರೀಮಂತಿಕೆಯಲ್ಲಿ ಕೇವಲ ಶೇಕಡಾ 1ರಷ್ಟು ಕೂಡ ಮಕ್ಕಳಿಗೆ ಉಳಿಸಿ ಹೋಗುವ ಯೋಜನೆಯಲ್ಲಿ ಬಿಲ್‌ಗೇಟ್ಸ್‌ ಇಲ್ಲ. ಇದು ಅಚ್ಚರಿ ಎನಿಸಿದರು ನಿಜ.

    ನಿಮಗೆ ಪ್ಲಾಸ್ಟಿಕ್ ಬಾಕ್ಸ್ʼನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ..? ಶೀಘ್ರದಲ್ಲೇ ಕ್ಯಾನ್ಸರ್ ಬರುವುದು ಖಚಿತ

    ರಾಜ್ ಶಮನಿ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಬಿಲ್‌ ಗೇಟ್ಸ್‌ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತನ್ನ ಮಕ್ಕಳು ತನ್ನ ಆಸ್ತಿಯಲ್ಲಿ ಶೇಕಡಾ 1ಕ್ಕಿಂತಲೂ ಕಡಿಮೆ ಮೊತ್ತವನ್ನು ಪಡೆಯಬಹುದು. ಏಕೆಂದರೆ ಇದರಿಂದ ಅವರಿಗೆ ಸಹಾಯ ಆಗಬಹುದು ಎಂದು ನಾನು ಭಾವಿಸುವುದಿಲ್ಲ, ಇದು ರಾಜವಂಶವಲ್ಲ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಡೆಕ್ ದಿಗ್ಗಜ ಬಿಲ್‌ ಗೇಟ್ಸ್ ಅವರಿಗೆ ಒಟ್ಟು ಮೂವರು ಮಕ್ಕಳಿದ್ದಾರೆ. ಅವರಲ್ಲಿ ಮೊದಲಿಗಳು 28 ವರ್ಷದ ಜೆನಿಫರ್ ಗೇಟ್ಸ್‌, 2ನೇಯವನು 25 ವರ್ಷದ ರೋರಿ ಗೇಟ್ಸ್ ಹಾಗೂ ಮೂರನೇಯವಳು ಮಗಳು 22 ವರ್ಷದ ಫೋಬೆ ಗೇಟ್ಸ್.

    ನಾನು ಅವರಿಗೆ ತಮ್ಮದೇ ಆದ ಗಳಿಕೆ ಮತ್ತು ಯಶಸ್ಸನ್ನು ಹೊಂದಲು ಅವಕಾಶ ನೀಡಲು ಬಯಸಿದ್ದೇನೆ. ಅವರು ಕೂಡ ಮಹತ್ವಪೂರ್ಣ ವ್ಯಕ್ತಿಗಳಾಗಬೇಕು ಅವರ ಮೇಲೆ  ನನಗಿದ್ದ ಅದ್ಭುತ ಅದೃಷ್ಟ ಮತ್ತು ಶ್ರೀಮಂತಿಕೆಯ ನೆರಳು ಬೀಳಬಾರದು ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಎಂತಹ ಅದ್ಭುತವಾದ ಮಾತು ನೋಡಿ ಬಿಲ್‌ ಗೇಟ್ಸ್ ಅವರದ್ದು, ಬಹುತೇಕ ಅತೀ ಶ್ರೀಮಂತರ ಮಕ್ಕಳು ಪೋಷಕರ ಶ್ರೀಮಂತಿಕೆ ನೆರಳಲ್ಲೇ ಬೆಳೆಯುತ್ತಾರೆ.

    ವ್ಯವಹಾರದ ಅರಿವು ಇಲ್ಲವೆಂದಲ್ಲ, ಆದರೆ ಎಲ್ಲರಿಗೂ ಇರುವುದಿಲ್ಲ. ಆದರೆ ಬಿಲ್‌ಗೇಟ್ಸ್ ಇಲ್ಲಿ ತಮ್ಮ ಮಕ್ಕಳಿಗೆ ತಮ್ಮ ಗಳಿಕೆಯ ಕಷ್ಟದ ಅರಿವಿರಬೇಕು. ತಮ್ಮ ಮಹತ್ವದ ಅರಿವಿರಬೇಕು ತಮ್ಮ ಕಾಲ ಮೇಲೆ ತಾವೇ ನಿಲ್ಲಬೇಕು ಎಂಬುದಕ್ಕೆ ಇಂತಹದೊಂದು ನಿರ್ಧಾರ ಮಾಡಿದ್ದಾರೆ.

    ಇದೇ ಪಾಡ್‌ಕ್ಯಾಸ್ಟ್ ಮಾತು ಮುಂದುವರಿಸುತ್ತಾ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಸಂಪತ್ತನ್ನು ನಿರ್ಮಿಸಿಕೊಂಡವರು ಬಹುಶಃ ಅದರಲ್ಲಿ ಹೆಚ್ಚಿನದನ್ನು ದಾನ ಮಾಡುವಲ್ಲಿ ಅತ್ಯಂತ ಆಸಕ್ತಿಕರರಾಗಿರುತ್ತಾರೆ ಎಂಬುದನ್ನು ಗೇಟ್ಸ್  ಇದೇ ವೇಳೆ ಒಪ್ಪಿಕೊಂಡರು. ವಿಭಿನ್ನ ಕುಟುಂಬಗಳು ಪರಿಸ್ಥಿತಿಯನ್ನು ವಿಭಿನ್ನವಾಗಿ ನೋಡುತ್ತವೆ ಎಂದು ಹೇಳುವ ಮೂಲಕ ಬಿಲ್‌ಗೇಟ್ಸ್ ಗಮನ ಸೆಳೆದಿದ್ದಾರೆ.

     

    Demo
    Share. Facebook Twitter LinkedIn Email WhatsApp

    Related Posts

    ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸಿದ್ಧತೆ: ಗ್ರೀನ್ ಸಿಗ್ನಲ್ ಕೊಟ್ರಾ ಟ್ರಂಪ್..!?

    June 19, 2025

    IndiGo: ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಯಲ್ಲಿ ತುರ್ತು ಭೂಸ್ಪರ್ಶ

    June 19, 2025

    Israel-Iran Conflict: ಇರಾನ್ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ಆಸ್ಪತ್ರೆ ಧ್ವಂಸ..!..!

    June 19, 2025

    Today’s Gold Price: ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! ಹೀಗಿದೆ ನೋಡಿ ಇಂದಿನ ಗೋಲ್ಡ್, ಸಿಲ್ವರ್ ರೇಟ್

    June 19, 2025

    Ahmedabad plane crash: ನನಗೆ ತುಂಬಾ ವಿಷಾದವಿದೆ: ಕ್ಷಮೆಯಾಚಿಸಿದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್!

    June 19, 2025

    ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಧೂಳುತುಂಬಿದ್ಯಾ? ಹಾಗಿದ್ರೆ, ಜಸ್ಟ್ ಹೀಗೆ ಕ್ಲೀನ್ ಮಾಡಿ​!

    June 19, 2025

    Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ!

    June 18, 2025

    ವಾಹನ ಸವಾರರಿಗೆ ಗುಡ್ ನ್ಯೂಸ್: ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿ!

    June 18, 2025

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್

    June 18, 2025

    Iran Isreal Crisis: ಇಸ್ರೇಲ್ ದಾಳಿಗೆ ತತ್ತರಿಸಿದ ಇರಾನ್: ಮಹಿಳೆಯರು, ಮಕ್ಕಳು ಸೇರಿ 585 ಜನರು ಸಾವು..!

    June 18, 2025

    India – Canada: ರಾಜತಾಂತ್ರಿಕರನ್ನು ಮರು ನಿಯೋಜಿಸಲು ಭಾರತ, ಕೆನಡಾ ಒಪ್ಪಿಗೆ..!

    June 18, 2025

    Shubhanshu Shukla: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷ ಯಾನಕ್ಕೆ ಹೊಸ ಡೇಟ್ ಫಿಕ್ಸ್..!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.