ಕಿಚ್ಚ ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದ ಶೂಟಿಂಗ್, ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೀತಿದ್ದು, ಪ್ರೀತಿಯ ಕಿಚ್ಚನನ್ನು ನೋಡೋಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟುಡಿಯೋ ಕಡೆ ಆಗಮಿಸ್ತಿದ್ದಾರೆ. ಆದ್ರೆ ಚಿತ್ರತಂಡ ಬಿಗಿ ಬಂದೋಬಸ್ತ್ ಹಾಕಿದ್ದು, ಸಿನಿಮಾದ ಶೂಟಿಂಗ್ ಸಂಬಂಧಿಸಿದಂತೆ ಯಾವುದೇ ದೃಶ್ಯಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಿದೆ.. ಕಳೆದ ನಾಲ್ಕೈದು ದಿನಗಳಿಂದ ನಾನ್ ಸ್ಟಾಪ್ ಶೂಟಿಂಗ್ ನಡೀತಿದೆ.
‘ಬಿಲ್ಲ ರಂಗ ಬಾಷಾ’ ಚಿತ್ರದ ಶೇ. 70ರಷ್ಟು ಶೂಟ್ ಸೆಟ್ನಲ್ಲೇ ಸಾಗಲಿದೆ. ಈ ಹಿಂದೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವನ್ನು ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದು ಕ್ರಿ.ಶ 2209ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವೈಜ್ಞಾನಿಕತೆ ಬೆರೆಸಿದ ಫ್ಯಾಂಟಸಿ ಕಥೆಯನ್ನು ಅನೂಪ್ ಭಂಡಾರಿ ಈ ಸಿನಿಮಾದಲ್ಲಿ ನಿರೂಪಿಸಲಿದ್ದಾರೆ.
ಬಿಲ್ಲ ರಂಗ ಬಾಷಾ ಎರಡು ಚಾಪ್ಟರ್‌ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಗುಲ್ಲಿದೆ. ಮೊದಲ ಚಾಪ್ಟರ್‌ಗೆ ‘ಫಸ್ಟ್ ಬ್ಲಡ್’ ಎಂದು ಚಿತ್ರತಂಡ ಕರೆದಿದೆ. ಈ ಚಿತ್ರದ ನಾಯಕಿ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಪೂಜಾ ಹೆಗ್ಡೆ, ರುಕ್ಮಿಣಿ ವಸಂತ ಹೆಸರು ಕೇಳಿ ಬರುತ್ತಿದೆ.