Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಓಟಿಟಿಯಲ್ಲಿ ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಜೀವನಗಾಥೆ

    By AIN AuthorNovember 22, 2023
    Share
    Facebook Twitter LinkedIn Pinterest Email
    Demo

    ವೈವಿಧ್ಯಮಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಹೊಂದಿರುವ ಕಂಟೆಂಟ್‌ ಅನ್ನು ಜನರಿಗೆ ನೀಡುವಲ್ಲಿ JioCinema ಮುಂಚೂಣಿಯಲ್ಲಿದೆ. ಆ ಪ್ರಯತ್ನದ ಭಾಗವಾಗಿ ಇದೀಗ, ಮುತ್ತಯ್ಯ ಮುರಳೀಧರನ್‌ (Muttiah Muralidharan) ಅವರ ಜೀವನವನ್ನಾಧರಿಸಿದ, ಎಂ.ಎಸ್‌. ಶ್ರೀಪತಿ (MS Sripathy) ನಿರ್ದೇಶಿಸಿರುವ ‘800’ ಸಿನಿಮಾ JioCinemaದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದೇ ಡಿಸೆಂಬರ್ 2ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ, ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ಬೌಲರ್‍‌ ಬದುಕಿನ ತೆರೆ-ಮರೆಯ ಕಥೆಯನ್ನು ಹೇಳುವ ಈ ಸಿನಿಮಾ, ಕ್ರಿಕೆಟ್ ಪ್ರಿಯರಿಗಂತೂ ಮನರಂಜನೆಯ ಮೃಷ್ಟಾನ್ನವನ್ನೇ ಉಣಿಸುತ್ತದೆ.

    ವಿವೇಕ್‌ ರಂಗಾಚಾರಿ ನಿರ್ಮಾಣದ ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿರುವುದು ವಿಶೇಷ. ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕ್ರಿಕೆಟ್‌ ಬದುಕಿನ ಸಾಧನೆಗಳನ್ನು ಹೇಳುವ ‘800’ ಸಿನಿಮಾ, ಅವರ ಖಾಸಗೀ ಬದುಕಿನ ಸಂಕಷ್ಟಗಳನ್ನೂ ನೋಡುಗರ ಎದುರಿಗೆ ತೆರೆದಿಡುತ್ತದೆ. ಹಲವು ಸಂಕಷ್ಟಗಳು, ವಿವಾದಗಳನ್ನು ಹಾದು ಕ್ರಿಕೆಟ್‌ ಜಗತ್ತಿನ ಲೆಜೆಂಡ್ ಆದ ಸ್ಪೂರ್ತಿಕಥೆಯನ್ನು ಹೇಳುತ್ತದೆ.

    ಟಿಷ್ ಆಳ್ವಿಕೆಯ ಅವಧಿಯಲ್ಲಿ, ಎಸ್ಟೆಟ್‌ ಕೆಲಸಗಾರರಾಗಿ ದಕ್ಷಿಣ ಭಾರತದಿಂದ ಶ್ರೀಲಂಕಾಗೆ ವಲಸೆ ಬರುವ ಮುತ್ತಯ್ಯ ಮುರಳೀಧರನ್ ಅವರ ತಾತನ ಕುಟುಂಬ ನಂತರ ಅಲ್ಲಿಯೇ ನೆಲೆಗೊಳ್ಳುತ್ತದೆ. ಬಾಲ್ಯದಿಂದಲೇ ಕ್ರಿಕೆಟ್ ವ್ಯಾಮೋಹ ಬೆಳೆಸಿಕೊಂಡಿದ್ದ ಮುತ್ತಯ್ಯ, ಬದುಕಿನುದ್ದಕ್ಕೂ ತಮ್ಮ ನೆಚ್ಚಿನ ಕ್ರೀಡೆಗೆ ಮತ್ತು ತಮ್ಮ ತಾಯ್ನೆಲಕ್ಕೆ ತೋರಿದ ಬದ್ಧತೆ ಅನನ್ಯವಾದದ್ದು. ವೈಯಕ್ತಿಕ ಬದುಕಿನ ಸಂಕಷ್ಟ-ಸವಾಲುಗಳ ನಡುವೆಯೂ ಕ್ರಿಕೆಟ್‌ ಜಗತ್ತಿನಲ್ಲಿ ಅವರು ನಿರ್ಮಿಸಿದ ದಾಖಲೆಗಳು, ಕ್ರೀಡಾಪ್ರೇಮಿಗಳಿಗಷ್ಟೇ ಅಲ್ಲ,ಸಾಧನೆಯ ಹಾದಿ ಹಿಡಿಯುವ ಹಂಬಲ ಇರುವ ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂಥದ್ದು. ‘800’ ಸಿನಿಮಾದಲ್ಲಿ, ತಮಿಳಿನ ಯುವನಟ ಮಧುರ್ ಮಿತ್ತಲ್, ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಹಿಮಾ ನಂಬಿಯತಾರ್, ನಾಸರ್, ಆರುಲ್‌ದಾಸ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

    ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಜೀವತುಂಬುವ ಅವಕಾಶ ಸಿಕ್ಕಿರುವುದು ಮಧುರ್ ಮಿತ್ತಲ್ ಅವರಿಗೆ ಸಾಕಷ್ಟು ಖುಷಿಕೊಟ್ಟಿದೆ. ತಮ್ಮ ಸಿನಿಮಾ JioCinemaದಲ್ಲಿ ಪ್ರೀಮಿಯರ್ ಆಗುತ್ತಿರುವ ಕುರಿತೂ ಅವರು ಅಷ್ಟೇ ಎಕ್ಸೈಟ್ ಆಗಿದ್ದಾರೆ. ‘ನಾನು ಚಿಕ್ಕಂದಿನಿಂದಲೂ ಕ್ರಿಕೆಟ್‌ ಅಭಿಮಾನಿಯಾಗಿದ್ದವನು. ಮುರಳೀಧರನ್ ಅವರ ಅಮೋಘ ಆಟವನ್ನು ನೋಡುತ್ತಲೇ ಬೆಳೆದವನು. ಈಗ ಅವರದ್ದೇ ಪಾತ್ರಕ್ಕೆ ತೆರೆಯ ಮೇಲೆ ಜೀವ ತುಂಬುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನಗೆ ಸಂದ ಬಹುದೊಡ್ಡ ಸಮ್ಮಾನ. ಈ ಪಾತ್ರಕ್ಕೆ ಗಟ್ಟಿತನವಿದೆ. ಇದೊಂದು ಸತತ ಪರಿಶ್ರಮ ಮತ್ತು ಬದ್ಧತೆಯ ಬದುಕನ್ನು ಬದುಕಿದ ವ್ಯಕ್ತಿಯ ಪಾತ್ರ. ಒಬ್ಬ ಕ್ರಿಕೆಟರ್ ಆಗಿ ಮುರಳೀಧರನ್ ಕೋಟ್ಯಂತರ ಜನರನ್ನು ಪ್ರಭಾವಿಸಿದ್ದಾರೆ. ಇಂಥ ಸಾಧಕನ ಬದುಕನ್ನು ಜನರಿಗೆ  ಪರಿಚಯಿಸುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ‘800’ ತುಂಬ ಪರಿಣಾಮಕಾರಿಯಾಗಿ ಮಾಡಿದೆ. ಈಗ ಈ ಸಿನಿಮಾ ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬ ಖುಷಿಯ ಸಂಗತಿ’ ಎನ್ನುತ್ತಾರೆ ನಟ ಮಧುರ್ ಮಿತ್ತಲ್.

     

    Demo
    Share. Facebook Twitter LinkedIn Email WhatsApp

    Related Posts

    ಕಾಲ್ತುಳಿತ ಕೇಸ್: ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹೆಚ್ಚಿಸಿದ ರಾಜ್ಯ ಸರ್ಕಾರ!

    June 7, 2025

    Glenn Maxwell: ನಿವೃತ್ತಿ ಘೋಷಿಸಿದ ಗ್ಲೆನ್ ಮ್ಯಾಕ್ಸ್ವೆಲ್: ಕೊನೆಗೂ ಕಾರಣ ಬಿಚ್ಚಿಟ್ಟ ಆಸ್ಟ್ರೇಲಿಯಾ ಆಲ್‌ ರೌಂಡರ್!

    June 7, 2025

    Bengaluru Stampede Case: ನೈತಿಕ ಹೊಣೆ ಹೊತ್ತು KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ..!

    June 7, 2025

    KL Rahul: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್..!

    June 7, 2025

    ಚಿನ್ನಸ್ವಾಮಿ ಭೀಕರ ಕಾಲ್ತುಳಿತ ಕೇಸ್: CID ತನಿಖೆ ಇಂದಿನಿಂದ ಶುರು!

    June 7, 2025

    ಕಾಲ್ತುಳಿತ ಕೇಸ್: RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ!

    June 7, 2025

    RCB ಖರೀದಿಸಲು ಅದೊಂದೇ ಕಾರಣ.. ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ!

    June 6, 2025

    ಆರ್ ಸಿಬಿಗೆ ಮತ್ತೆ ಆಘಾತ: ಬೆಂಗಳೂರಿನಲ್ಲಿ ಮತ್ತೊಂದು FIR ದಾಖಲು!

    June 6, 2025

    ನೂಕು ನುಗ್ಗಲಿಗೆ ಕೊಹ್ಲಿ ಕಾರಣ: ಬೆಂಗಳೂರಿನಲ್ಲಿ ವಿರಾಟ್ ವಿರುದ್ಧ ದೂರು ದಾಖಲು!

    June 6, 2025

    Chinnaswamy Stampede: KSCA ವಿರುದ್ಧ ಬಲವಂತದ ಕ್ರಮ ಬೇಡ – ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

    June 6, 2025

    ಬೆಂಗಳೂರಿನ ಕಾಲ್ತುಳಿತ ಪ್ರಕರಣ: ಭಾರೀ ಟ್ರೆಂಡಿಂಗ್ ನಲ್ಲಿದೆ #ArrestKohli..!

    June 6, 2025

    RCB Victory Parade Stampede: ನಿಖಿಲ್ ಸೋಸಲೆ ಯಾರು?.. ಅವರಿಗೂ RCBಗೂ ಏನು ಸಂಬಂಧ?

    June 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.