ಬೀದರ್:- ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಿಜೆಪಿಗೆ ಸಹಿಸಲಾಗುತ್ತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ರಾತ್ರಿ ಮಲಗುವಾಗ ಈ ಲಕ್ಷಣ ಕಂಡುಬರುತ್ತಾ!? ಹಾಗಿದ್ರೆ ಇದು ಕಿಡ್ನಿ ಅಪಾಯದ ಮುನ್ಸೂಚನೆ!
ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ವೈರಲ್ ಅಗಿರುವ ಆಳಂದ್ ಶಾಸಕ ಬಿಅರ್ ಪಾಟೀಲ್ ಅವರ ಕ್ಲಿಪ್ಪಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ, ತಮ್ಮ ಸರ್ಕಾರ ಭ್ರಷ್ಟಾಚಾರರಹಿತ ಸರ್ಕಾರ, ಲಂಚಗುಳಿತನಕ್ಕೆ ಜೀರೋ ಟಾಲರನ್ಸ್, ಭ್ರಷ್ಟಾಚಾರದಲ್ಲಿ ಯಾರೇ ತೊಡಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಅರೋಪ ಮಾಡಿ, ಪೇಸಿಎಮ್ ಅಭಿಯಾನ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ಅರೋಪಿಸುತ್ತಿದೆಯಲ್ಲ ಎಂದಾಗ, ಬಿಜೆಪಿಗೆ ಸುಳ್ಳು ಹೇಳುವ ಚಾಳಿ, ತಮ್ಮ ಸರ್ಕಾರದ ಜನಪ್ರತಿಯತೆ ಅದಕ್ಕೆ ಸಹಿಸಲಾಗುತ್ತಿಲ್ಲ ಎಂದರು.