ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿಯಿಂದ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಲಾಗಿದೆ. ಇದು ಯತ್ನಾಳ್ ಬಣದ ನಾಯಕರ ಆತಂಕ ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ನಡೆ ಏನು ? ಹೈಕಮಾಂಡ್ ನಿರ್ಧಾರಕ್ಕೆ ಕೌಂಟರ್ ಕೊಡಬೇಕಾ ? ಹೊಸ ಪಕ್ಷ ರಚನೆ ಮಾಡಬೇಕಾ ? ಉಚ್ಛಾಟನೆ ಆದೇಶ ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್ ಶಿಸ್ತು ಸಮಿತಿಗೆ ಮರುಪರಿಶೀಲನಾ ಅರ್ಜಿ ಬರೆಯಬೇಕಾ ? ನಮ್ಮ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಚರ್ಚಿಸಲು ಯತ್ನಾಳ್ ಟೀಂ ಸಭೆ ನಡೆಸ್ತಿದೆ.
ಬೆಂಗಳೂರಿನ ಯುಬಿಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲಿ ಯತ್ನಾಳ್ ಟೀಮ್ ಸಭೆ ನಡೆದಿದೆ. ಜಿ ಎಂ ಸಿದ್ದೇಶ್ವರ್ ಮನೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೆಬೆಲ್ಸ್ ನಾಯಕರಾದ ಬಸನಗೌಡಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ಪಾಲ್ಗೊಂಡಿದ್ದಾರೆ.
ಬಿಜೆಪಿಯಿಂದ ಉಚ್ಛಾಟನೆ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲೂ ಮಾಧ್ಯಮಗಳ ಮುಂದೆ ಮಾತನಾಡಿಲ್ಲ. ಹೀಗಾಗಿ ಯತ್ನಾಳ್ ಬಣದ ನಿರ್ಧಾರವೇನು ? ಹೈಕಮಾಂಡ್ ಗೆ ಟಕ್ಕರ್ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.