ಮಂಡ್ಯ : ಜೆಡಿಎಸ್‌ನ್ನು ಬಿಜೆಪಿ ಜೋಕರ್ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬಿಜೆಪಿಗರ ಜನಾಕ್ರೋಶ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಗರ ವಿರುದ್ದ ಹರಿಹಾಯ್ದಿದಿದ್ದಾರೆ.
ಇಂದು ಮಂಡ್ಯ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನೆಲದಲ್ಲಿ ಜೆಡಿಎಸ್ ಬಿಟ್ಟು ಜನಾಕ್ರೋಶ ಯಾತ್ರೆ ಮಾಡ್ತಿದ್ದಾರೆ. ಕುಮಾರಸ್ವಾಮಿ ನೆಲದಲ್ಲೆ ಅವರನ್ನ ಬಿಟ್ಟಿದ್ದಾರೆ. ಬರಿ ಬಿಜೆಪಿಯವರು ಬರ್ತಿರೋದರಿಂದ ಗೊತ್ತಾಗಿದೆ ಮನೆ ಒಡೆದಿದೆ ಅಂತ ಕುಮಾರಸ್ವಾಮಿಯವ್ರಿಗೆ ಪಾಪಾ ಈ ಪರಿಸ್ಥಿತಿ ಬರಬಾರ್ದಿತ್ತು. ಕುಮಾರಸ್ವಾಮಿ ಎಲ್ಲಿಗೋದ್ರು ಈತರ ಬೆನ್ನಿಗೆ ಚಾಕು ಹಾಕಿಸಿಕೊಳ್ಳುತ್ತಾರೆ. ಗುಜರಾತ್ ರೀತಿ ಕರ್ನಾಟಕದಲ್ಲೂ ನಿಮ್ ಜನತಾದಳ ಮುಗಿಸ್ತಾರೆ ಹುಷಾರ್ ಕುಮಾರಣ್ಣ. ಕುಮಾರಣ್ಣನಿಗೆ ಇದು ಎಚ್ಚರಿಕೆ ಗಂಟೆ ಎಂದು ತಿರುಗೇಟು ನೀಡಿದರು.
ಬೆಲೆ ಏರಿಕೆ ವಿರೋಧಿಸಿ ಜನಾಕ್ರೋಶ ಯಾತ್ರೆ ; ಸಿಎಂ ತವರಿನಲ್ಲಿ ಮೊಳಗಿದ ಕೇಸರಿ ಕಹಳೆ
ಮೋದಿ ಬೆಲೆ ಏರಿಕೆ ಮಾಡಿದ್ದಾರೆ. ಅವರ ವಿರುದ್ದ ಇಂದು ಮಂಡ್ಯದಲ್ಲಿ ಪ್ರತಿಭಟನೆ ಮಾಡ್ತಿದ್ದಾರಾ?. ಮಹಿಳೆಯರ ಬಾಯಿಗೆ ಮೋದಿಯವ್ರು ಮಣ್ಣಾಕಿದ್ದಾರೆ. ಮಹಿಳೆಯರ ಬಾಯಿಗೆ ಮೋದಿ ಮಣ್ಣಾಕಿದಕ್ಕೆ ಪ್ರತಿಭಟನೆ ಮಾಡ್ತಿದ್ದಾರಾ?. ಮೋದಿ ವಿರುದ್ದ ಪ್ರತಿಭಟನೆಗೆ ಬರ್ತಿರೊ ನಿಮಗೆ ಮಜ್ಜಿಗೆ ಕೊಡುತ್ತೀನಿ ಬನ್ನಿ ಎಂದಿದ್ದಾರೆ. ತಮ್ಮದೆ ನಾಯಕರ ವಿರುದ್ದ ಪ್ರತಿಭಟನೆಗೆ ಬರ್ತಿರೋ ಬಿಜೆಪಿಗರಿಗೆ ಸುಸ್ವಾಗತ ಎಂದು ಲೇವಡಿ ಮಾಡಿದರು.