ಬಾಗಲಕೋಟೆ : ಬಿಜೆಪಿಯವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ ಅದಕ್ಕೆ ಹೋರಾಟ ಮಾಡುತ್ತಾಋೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಬಿಜೆಪಿ ಜನಾಕ್ರೋಶ ಯಾತ್ರೆಗೆ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ಬೆಲೆ ಏರಿಕೆಯಾಗಿಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಬಾರಿ ಬೆಲೆ ಏರಿಕೆ ಕಂಡಿದೆ. ಬಿಜೆಪಿಯವರ ತಟ್ಟೆಯಲ್ಲಿ ಕತ್ತಿ ಸತ್ತಿದೆ. ಅದನ್ನು ಅವರು ನೋಡ್ತಾ ಇಲ್ಲ. ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳುತ್ತಾರೆ. ಹಾಗಾಗಿ ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಅವರು ಪ್ರತಿಭಟನೆ ಮಾಡುತ್ತಾರೆ ಮಾಡ್ಲಿ ಬಿಡಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಜೆಡಿಎಸ್‌ನ ಜೋಕರ್ ಮಾಡಿದೆ, ಕುಮಾರಣ್ಣ ಹುಷಾರ್ ; ಶಾಸಕ ರವಿಗಣಿಗ
ಇನ್ನೂ ರೈತರಿಗೆ ಅನುಕೂಲವಾಗಲೆಂದು ಹಾಲಿನ ದರ ಏರಿಕೆಯಾಗಿದೆ. ಉಳಿದೆಲ್ಲ ಬೆಲೆ ಏರಿಕೆಯೂ ಕೇಂದ್ರ ಸರ್ಕಾರವೇ ಮಾಡಿದೆ. ಬಿಜೆಪಿಯವರು ಮೊದಲು ಇದನ್ನ ಅರ್ಥ ಮಾಡಿಕೊಳ್ಳಲಿ ಎಂದರು.