ರಾಯಚೂರು : ರಾಯಚೂರಿನಲ್ಲಿ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ತಮ್ಮ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಖುದ್ದು ಶಾಸಕ ಶಿವರಾಜ್ ಪಾಟೀಲ್ ಅವರೇ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದಾರೆ.
ರಾಯಚೂರು ಎಸ್ ಪಿ ಪುಟ್ಟಮಾದಯ್ಯ ಎದುರು ಫೋನ್ ಟ್ಯಾಪ್ ಬಗ್ಗೆ ಪ್ರಸ್ತಾಪಿಸಿದ್ದು, ಸುಮಾರು 70 ಸಲ ಫೋನ್ ಲೊಕೇಶನ್ ಪರಿಶೀಲಿಸಲಾಗಿ. ಖುದ್ದು ಪೊಲೀಸ್ ಠಾಣೆಗೆ ಹೋಗಿ ಲೋಕೇಶನ್ ತೆಗಿಸ್ತಾರೆ ಅಂತ ಎಸ್ಪಿ ಎದುರು ಅಳಲು ತೋಡಿಕೊಂಡಿದ್ದಾರೆ.
ಇದೇ ಏಪ್ರಿಲ್ 1 ರಂದು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ರಾಯಚೂರು ನಗರದ ಎಸ್ ಪಿ ಕಚೇರಿ ಎದುರು ಪ್ರತಿಭಟಿಸಿದ್ದರು. ಈರೇಶ್ ಅನ್ನೋ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ವೇಳೆ ಥಳಿಸಿದ್ದಾರೆ. ಇದೇ ಕಾರಣಕ್ಕೆ ಈರೇಶ್ ಮೃತಪಟ್ಟಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಎಸ್ ಪಿ ಪುಟ್ಟಮಾದಯ್ಯ ಜೊತೆ ಘಟನೆ ಬಗ್ಗೆ ವಿವರಿಸೊ ವೇಳೆ ಫೋನ್ ಟ್ಯಾಪ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.