ಮೈಸೂರು:- ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಲುವೆಗೆ ನೀರಿಗಾಗಿ ಪಾದಯಾತ್ರೆ- ಶಾಸಕಿ ಕರೆಮ್ಮ ಅಸ್ವಸ್ಥ, ಆಸ್ಪತ್ರೆಗೆ ದಾಖಲು!
ಈ ಸಂಬಂಧ ಮಾತನಾಡಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡಲಿ.ಅದರ ಜೊತೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನೂ ಸೇರಿಸಿ ಪ್ರತಿಭಟನೆ ಮಾಡಲಿ ಎಂದರು.
ಬಿಜೆಪಿ ಶಾಸಕರನ್ನ ಸ್ಪೀಕರ್ ಅಮಾನತು ಮಾಡಿದ ಸಂಬಂಧ ಸದನಕ್ಕೆ ಅಗೌರವ ತೋರಿದ ಶಾಸಕರನ್ನು ಸ್ಪೀಕರ್ ಉಚ್ಛಾಟನೆ ಮಾಡಿದ್ದಾರೆ. ಮುಂದೆ ಯಾರು ಈ ರೀತಿ ಮಾಡಬಾರದು ಅಂತ ಈ ರೀತಿ ಮಾಡಿದ್ದಾರೆ. ಸ್ಪೀಕರ್ ಕ್ರಮ ಸರಿಯಿದೆ. ಈ ಹಿಂದೆ ಪ್ರಧಾನಿ ಮೋದಿ ಸರ್ಕಾರದಲ್ಲಿ ಇಡೀ ಸದನವನ್ನೇ ಹೊರ ಹಾಕಿದ್ದರು. ಎಷ್ಟೋ ಜನರನ್ನ ಅಮಾನತು ಮಾಡಿದರು. ಇದೆಲ್ಲವನ್ನೂ ಬಿಜೆಪಿ ಮರೆತಂತಿದೆ ಎಂದು ಟಾಂಗ್ ಕೊಟ್ಟರು.
ಕೆ.ಆರ್ ಆಸ್ಪತ್ರೆ ಹಾಗೂ ನೂತನ ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕೊರತೆ ಏನಿಲ್ಲ. ಕಳೆದ ಬಾರಿ ಬಂದಿದ್ದ ಸಂದರ್ಭದಲ್ಲಿ ಸೂಚನೆ ಕೊಟ್ಟಿದ್ದೇನೆ. ಜನ ಆರೋಗ್ಯ ಸಮಸ್ಯೆಯಿಂದ ಇಲ್ಲಿಗೆ ಹೆಚ್ಚು ಬರುತ್ತಾರೆ. ವೈದ್ಯರು ಒಳ್ಳೆಯ ಚಿಕಿತ್ಸೆ ಕೊಡುತ್ತಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುತ್ತೇವೆ ಎಂದರು.
ಬಹುತೇಕ ವಕ್ಫ್ ಆಸ್ತಿ ಕಾಂಗ್ರೆಸ್ ನಾಯಕರದ್ದು ಎಂಬ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬೊಮ್ಮಾಯಿ ಸಿಎಂ ಆಗಿದ್ದಾಗ ಏನು ಮಾಡುತ್ತಿದ್ರು. ಈಗ ರಾಜಕೀಯಕ್ಕೆ ಏನು ಬೇಕಾದ್ರೂ ಮಾತನಾಡುತ್ತಾರೆ ಎಂದರು.