ಬೆಂಗಳೂರು:- ಡೆತ್ ನೋಟ್ ಬರೆದಿಟ್ಟು ಬಿಜೆಪಿ ಕಾರ್ಯಕರ್ತ ನೇಣಿಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಶಾಸಕನ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಎಸ್, ವಾಟ್ಸಪ್ ನಲ್ಲಿ ಈ ಹಿಂದೆ ಮೃತ ವಿನಯ್ ಸೋಮಯ್ಯ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಬಗ್ಗೆ ಅಪಹಾಸ್ಯ ಮಾಡಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ವಿರುದ್ಧ ಕಾಂಗ್ರೆಸ್ ಮುಖಂಡ ತನ್ನೀರ ಮೈನಾ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಅವರನ್ನು ಪೊಲೀಸರು ಎರಡು ತಿಂಗಳ ಹಿಂದೆ ಬಂಧಿಸಿದ್ದರು. ಬಂಧನದ ಬಳಿಕ ಬಹಳ ಮನನೊಂದಿದ್ದ ವಿನಯ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ನಗರದಲ್ಲಿ ಛಲವಾದಿ ಮಾತನಾಡಿ, ಇಂದು ಬೆಳಿಗ್ಗೆ ನಮಗೆ ವಿಚಾರ ಗೊತ್ತಾಯ್ತು. ಘಟನೆ ಬಗ್ಗೆ ಪೊನ್ನಣ್ಣ ಮತ್ತು ಮಂತರ್ ಗೌಡ ಶಾಸಕರ ವಿರುದ್ಧ ಆರೋಪ ಇದೆ. ತೊಂದರೆ ಕೊಟ್ಟ ಕಾರಣದಿಂದ ಕೋರ್ಟ್ ಗೆ ಹೋಗಿದ್ದಾರೆ. ಇಷ್ಟು ಕಾಲ ತಾಯಿ ಮುಖ ನೋಡೋಕೆ ಆಗಿಲ್ಲ ಅಂತ ಹೇಳ್ಕೊಂಡಿದಾರೆ. ಟಾಯ್ಲಟ್ ನಲ್ಲಿ ಸ್ವಚ್ಚತೆ ಇಲ್ಲ ಅಂತ ವಿನಯ್ ಹೇಳ್ಕೊಂಡಿರೋದು ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ.
ಅದು ಹಾಕಿರೋದು ವಿನಯ್ ಅಲ್ಲ ಬೇರೊಬ್ಬರು ಹಾಕಿರೋದು. ಆ ಗ್ರೂಪ್ ಅಲ್ಲಿ ನಾಲ್ಕೈದು ಜನ ಅಡ್ಮಿನ್ ಗಳಲ್ಲಿ ಇವರು ಒಬ್ಬರು. ಅರೆಸ್ಟ್ ಮಾಡಿ ವಿಚಾರಣೆ ಮಾಡಬಹುದಿತ್ತು ಆದರೆ ಹಾಗೆ ಮಾಡಿಲ್ಲ. ಇದರಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನವರ ಅಧಿಕಾರದ ಅಟ್ಟಹಾಸ ತೋರಿಸುತ್ತಿದೆ ಇದೆ.
ಪರಶುರಾಮ್ ಆತ್ಮಹತ್ಯೆಯಲ್ಲಿ ಇವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಸಚಿನ್ ಪಾಂಚಾಲ್ ವಿಷಯಲದಲ್ಲಿ ಪ್ರಿಯಾಂಕ ಖರ್ಗೆ ಹೆಸರು ಬಂದಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬರು ತೀರ್ಕೊಂರ್ಡು. ವಾಲ್ಮೀಕಿ ನಿಗಮದ ವಿಚಾರದಲ್ಲಿ ನಾಗೇಂದ್ರ ಹೆಸರಲ್ಲಿ ಚಂದ್ರಶೇಕರ್ ಆತ್ಮಹತ್ಯೆ ಮಾಡಿಕೊಂಡ್ರು. ಗುಲ್ಬರ್ಗಾದಲ್ಲಿ ಪ್ರಿಯಾಂಕ್ ಖರ್ಗೆ ಒಂದು ಮಾತನ್ನ ಹೇಳಿದ್ರು. ನಾವು ಬೀದಿಗಿಳಿದರೆ ನೀವು ಓಡಾಡೋದು ಕಷ್ಟ ಆಗುತ್ತೆ ಅಂತ ಹೇಳಿದ್ರು. ಅದೇ ಈಗ ಆಗಿದೆ,ನಮ್ಮ ಕಾರ್ಯಕರ್ತರ ಪರಿಸ್ಥಿತಿ ಹೀಗೆ ಆಗಿದೆ. ತನ್ನೀರ್ ಮೈನಾ ಹೆಸರು ಬರ್ದಿದಾರೆ ಅವರೇ ಕಾರಣ ಅಂತ ಹೇಳಿದಾರೆ, ಡೆತ್ ನೋಟ್ ಅಲ್ಲಿರೋ ಶಾಸಕರು ಮತ್ತು ಎಲ್ಲರೂ ಅರೆಸ್ಟ್ ಆಗ್ಬೇಕು. ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿದ್ರೆ ಸರ್ಕಾರವನ್ನ ಟಾರ್ಗೆಟ್ ಮಾಡ್ತೀವಿ.ಗಾಂಧಿ ತತ್ವದ ಮೇಲೆ ಪಾರ್ಟಿ ಕಟ್ಟಿರೋದು ಅಂತ ಹೇಳ್ತೀರಾ. ಆದ್ರೆ ನಾವು ಹೋರಾಟ ಮಾಡಿದ್ರೆ ಬೆಲೆ ಇಲ್ಲ ಗಾಂಧಿಗೆ ಬೆಲೆ ಇಲ್ಲ.
ಸಿಬಿಐ ಗೆ ಕೊಡಿ ಈ ಕೇಸ್,ಸಿಬಿಐ ಅಂದ್ರೆ ಯಾಕೆ ಮುಖ ಮುರಿತೀರಿ.ತೊಂದ್ರೆ ಆದ್ರೆ ನಮ್ಮನ್ನ ಸಂಪರ್ಕಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಗ್ರೂಪ್ ಅಲ್ಲಿರೋದೆಲ್ಲಾ ತೆಗ್ದಿದಾನೆ ಬೇಲ್ ತಗೊಂಡಿದಾನೆ
ಆದ್ರು ಪೊಲೀಸರು ಯಾಕೆ ಆತನನ್ನ ಹುಡುಕ್ತಿದ್ರು. ಇದಕ್ಕೆ Sp ಕೂಡ ನೇರ ಹೊಣೆ ಅವರನ್ನ ಕೂಡ ಸಸ್ಪೆಂಡ್ ಮಾಡ್ಬೇಕು ಎಂದಿದ್ದಾರೆ.