ಸಿಎಸ್ ಕೆ ವಿರುದ್ಧ ನಿನ್ನೆ ಆರ್ ಸಿಬಿ ರಣರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಆರ್ ಸಿಬಿ ನೀಡಿದ ರನ್ ಬೆನ್ನತ್ತಿದ ಸಿಎಸ್‌ಕೆ ಎರಡು ರನ್ ಗಳಲ್ಲಿ ಸೋಲು ಕಂಡಿತು. ಥೇಟ್ ಸಿನಿಮಾ ರೀತಿಯೇ ಈ ಎರಡು ಪಂದ್ಯಗಳನ್ನು ಅಭಿಮಾನಿಗಳು ಕೂಡ ಎಂಜಾಯ್ ಮಾಡಿದ್ದಾರೆ. ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ ಕೂಡ ಆರ್ ಸಿಬಿ, ಚೆನ್ನೈ ಪಂದ್ಯ ವೀಕ್ಷಿಸಿದ್ದಾರೆ.
ಬಾಲಿವುಡ್ ಸ್ಟಾರ್ ಕಪಲ್:
ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಕುಳಿತು ಮ್ಯಾಚ್ ನೋಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿತೇಶ್ ಜೆನಿಲಿಯಾ ಮುಂಬೈನಲ್ಲಿ ನೆಲೆಸಿದ್ದು, ಅವರು ಹೈವೋಲ್ಟೇಜ್ ಆರ್ ಸಿಬಿ ಹಾಗೂ ಚೆನ್ನೈ ಪಂದ್ಯ ವೀಕ್ಷಣೆಗಾಗಿ ಬೆಂಗಳೂರಿಗೆ ಬಂದಿರುವುದು ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಖುಷಿ ಕೂಡ ಆಗಿದೆ.
ಜಿನಿಲಿಯಾ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಣ್ಣ ನಟನೆಯ ಸತ್ಯ ಇನ್ ಲವ್ ಸಿನಿಮಾದ ನಾಯಕಿಯಾಗಿ ನಟಿಸಿದ್ದರು. ನಂತರ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರಲಿಲ್ಲ. ಹಲವು ವರ್ಷಗಳ ಬಳಿಕ ಮತ್ತೆ ಜೆನಿಲಿಯಾ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ‘ಜೂನಿಯರ್’ ಸಿನಿಮಾದಲ್ಲಿ ಜೆನಿಲಿಯಾ ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.