ಚಾಮರಾಜನಗರ : ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಜಿಲ್ಲಾಧಿಕಾರಿ ಹಾಗೂ ಸಿಬ್ಬಂದಿ ಕಚೇರಿಯಿಮದ ಹೊರ ಬಂದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲಾಧಿಕಾರಿ,ಜಿಲ್ಲಾ ಎಸ್ಪಿ ಸೇರಿದಂತೆ ಬಹುತೇಕ ಸರ್ಕಾರಿ ಅಧಿಕಾರಿಗಳ ಈ ಮೇಲ್ ಗೆ ಬಾಂಬ್ ಬೆದರಿಕೆ ಪತ್ರ ರವಾನೆ ಮಾಡಲಾಗಿದ್ದು, ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆಯಿಂದ ಭಯಭೀತರಾದ ಸರ್ಕಾರಿ ಅಧಿಕಾರಿಗಳು, ಕಚೇರಿಯಿಂದ ಹೊರಗೆ ಬಂದಿದ್ದಾರೆ.
ಇನ್ನೂ ಬಾಂಬ್ ಬೆದರಿಕೆ ಹಿನ್ನಲೆ ಮುಂಜಾಗ್ರತಾ ಕ್ರಮಕೈಗೊಂಡ ಪೋಲೀಸ್ ಅಧಿಕಾರಿಗಳು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ , ಶ್ವಾನ ದಳ ಹಾಗೂ ಅಗ್ಮಿಶಾಮಕ ದಳದಿಂದ ಪರೀಶಿಲನೆ ನಡೆಸಲಾಯಿತು. ಜೊತೆಗೆ ಡಿಸಿ ಕಚೇರಿ ಮುಂಭಾಗ ಗೇಟ್ ಬಂದ್ ಮಾಡಿ, ಡಿಸಿ ಆಫೀಸಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.