ಬೆಂಗಳೂರು: ಸಚಿವ ಕೆ.ಎನ್ .ರಾಜಣ್ಣ ಅವರ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಇದರ ನಡುವೆಯೇ ಸಿಎಂ ಅತ್ಯಾಪ್ತನಾಗಿದ್ದು, ಇದೀಗ ಅತೃಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಬಿ.ಆರ್.ಪಾಟೀಲ್ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ.
ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್ ಪಾಟೀಲ್ ದೂರವಾಣಿ ಮೂಲಕ ಆಪ್ತರೊಡನೆ ಮಾತುಕತೆ ನಡೆಸಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಪಸ್ಟ್ ಭೇಟಿ ಮಾಡಿಸಿದವನು ನಾನು, ಅವನು ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ.
ನನ್ನ ಗ್ರಹಚಾರ ಎಂದು ಪರೋಕ್ಷವಾಗಿ ಬೇಸರವ್ಯಕ್ತಪಡಿಸಿದ್ದಾರೆ. ನಮಗೆ ಗಾಡು ಇಲ್ಲ ಫಾದರ್ ಇಲ್ಲ. ಸುರ್ಜೆವಾಲ ಬೇಟಿ ಮಾಡಿ ಮಾತನಾಡಿದ್ದೇನೆ. ಗಂಭೀರವಾಗಿ ನನ್ನ ಮಾತು ಕೇಳಿದ್ದಾರೆ . ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದಿರುವ ವಿಡಿಯೋ ವೈರಲ್ ಆಗಿದೆ.
ಇನ್ನೂ ಬಿ.ಆರ್ ಪಾಟೀಲ್ ವಿಡಿಯೋ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹೌದು ನಾನು ಅದೃಷ್ಟವಂತ ಅದಕ್ಕೆ ಸಿಎಂ ಆಗಿದೀನಿ. ನಾನೂ ಅವನೂ ಒಟ್ಟಿಗೆ ಶಾಸಕರಾಗಿದ್ವಿ ಅಲ್ವಾ ಅದಕ್ಕೆ ಹೇಳಿದ್ರು ಹೇಳಿರಬಹುದು. ಹೌದಯ್ಯ ಅವನು ಹೇಳಿದ್ದಾನೆ. ಅದಕ್ಕೆ ನಾನು ಏನು ಮಾಡಲಿ ಹೇಳಿ, ಬಿ ಆರ್ ಪಾಟೀಲ್ ಕರೆಸಿ ಮಾತಾಡ್ತೇನೆ ಎಂದು ಹೇಳಿದ್ದಾರೆ.