ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿ ಪಿ.ವಿ.ಸಿಂಧು ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನ ಸೌಂದರ್ಯಕ್ಕೆ ಮಾತ್ರವಲ್ಲ ನಮ್ಮ ಹೆಮ್ಮೆಯ ಕೆಂಪು ಸೈನ್ಯಕ್ಕೂ ಫಿದಾ ಆಗಿದ್ದಾರೆ. ಪಿವಿ ಸಿಂಧು ಮೂಲತಃ ತೆಲಂಗಾಣದ ರಾಜಧಾನಿ ಹೈದ್ರಾಬಾದ್‌ನವರು. ಕಳೆದ ಕೆಲ ವಾರಗಳಿಂದ ಮಡಿಕೇರಿಯಲ್ಲಿ ಪತಿ ಹಾಗೂ ಸ್ನೇಹಿತರೊಟ್ಟಿಗೆ ಸಮಯ ಕಳೆದಿದ್ದಾರೆ. ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿರುವ ಅವರು ಅಲ್ಲಿಯೇ ಒಂದು ಎಸ್ಟೇಟ್ ಖರೀದಿಸುವ ಬಗ್ಗೆಯೂ ಆಶಯ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ನಡುವೆ ಸಿಂಧು ಮೊನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವರ್ಸಸ್ ಆರ್ ಆರ್ ಪಂದ್ಯಕ್ಕೆ ಹಾಜರಾತಿ ಹಾಕಿದ್ದಾರೆ. ಈ ವೇಳೆ ಆರ್ಸಿಬಿ ಬಾವುಟ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಸಿಂಧು ಮೂಲತಃ ಹೈದ್ರಾಬಾದ್‌ನವರು. ಆದ್ರೆ ತಮ್ಮದೇ ಹೈದ್ರಾಬಾದ್ ಸನ್ ರೈಸರ್ಸ್ ತಂಡದ ಬದಲು ಬೆಂಗಳೂರು ರಾಯಲ್ ಚಾಲೆಂಜರ್ಸ್‌ನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅಲ್ಲದೇ ಈ ಬಾರಿ ಆರ್‌ಬಿಸಿ ಅಭಿಮಾನಿಗಳ ಧ್ಯೇಯ ವಾಕ್ಯದಂತಿರುವ ಈ ಸಲ ಕಪ್ ನಮ್ಮದೇ ಎಂದಿದ್ದಾರೆ. ಆರ್‌ಸಿಬಿ ಹೋಮ್ ಗ್ರೌಂಡ್‌ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿತ್ತು. ಹೀಗಾಗಿ ಆರ್‌ಆರ್ ವಿರುದ್ಧ ಗೆಲ್ಲುತ್ತಾ? ಸೋಲಿದೆಯಾ? ಎಂ ಚರ್ಚೆ ಇತ್ತು. ಆದ್ರೆ ಇಡೀ ತಂಡದ ಅದ್ಭುತ ಆಟದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭರ್ಜರಿಯಾಗಿ ಕೆಂಪು ಸೈನ್ಯ ಗೆದ್ದಿದೆ. ಹೀಗಾಗಿ ತಮ್ಮನ್ನು ಲಕ್ಕಿ ಚಾರ್ಮ್ ಅಂತಾ ಸಿಂಧು ಕರೆದುಕೊಂಡಿದ್ದಾರೆ.
ಪಿವಿ ಸಿಂಧು ಆರ್‌ಸಿಬಿಗೆ ಚಿಯರ್ ಅಪ್ ಮಾಡಿದ್ದಾರೆ. ಅಲ್ಲದೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಬಾವುಟ ಹಿಡಿದಿರುವ ಫೋಟೋ ಹಂಚಿಕೊಂಡು, ಮೆದುಳು ಕಿತ್ತಳೆ ಸೈನ್ಯ ಅಂತ ಹೇಳುತ್ತೆ, ಆದರೆ ಹೃದಯ ಹೊಸ ನಗರ ಹೊಸ ತಂಡ ಅಂತ ಹೇಳುತ್ತೆ ಈ ಸಲಾ ಕಪ್ ನಮ್ಮದೇ ಅಂತಾ ಹಾರ್ಟ್ ಸಿಂಬಲ್ ಹಾಕಿದ್ದಾರೆ. ಹೋಮ್ ಸಿಟಿ ತಂಡಕ್ಕೆ ಸಪೋರ್ಟ್ ಮಾಡೋದನ್ನು ಬಿಟ್ಟು ಆರ್‌ಸಿಬಿಗೆ ಜೈ ಎಂದಿರುವ ಪಿವಿ ಸಿಂಧುಗೆ ಆರ್‌ಸಿಬಿ ಫ್ಯಾನ್ಸ್ ಜೈಕಾರ ಹಾಕುತ್ತಿದ್ದಾರೆ.