ರಾಯಚೂರು:– ಶಾಸಕಿ ಕರೆಮ್ಮ ನಾಯಕ್ ಪುತ್ರಿ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದೇವದುರ್ಗ ತಾಲೂಕು ಮಿಯ್ಯಾಪುರ ಕ್ರಾಸ್ಬಳಿ ಜರುಗಿದೆ.
ಆಂಧ್ರ ಮೂಲದ ಕೋಮಿಶೆಟ್ಟಿ ಕೃಷ್ಣ ಗಾಯಗೊಂಡ ಚಾಲಕ. ಇದೀಗ ಗಾಯಾಳುವನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಳಿಕ ನೆರವಿನ ಭರವಸೆ ನೀಡಿದ ಶಾಸಕಿ ಪುತ್ರಿ, ಬಳಿಕ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ತಿಳಿದು ಬಂದಿದೆ.