ಕೊಡಗು ; ಕೊಡಗಿನಲ್ಲಿ ಭೀಕರ ಹತ್ಯೆ ನಡೆದಿದೆ. ಅನೈತಿಕ ಸಂಬಂಧ ಶಂಕೆಯಿಂದಾಗಿ ಕತ್ತಿಯಿಂದ ಕಡಿದು ನಾಲ್ವರನ್ನು ಹತ್ಯೆಗೈಯ್ಯಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಲ್ಲಿ ವಾಸವಿದ್ದ ಕುಟುಂಬವನ್ನು ಕೊಲೆ ಮಾಡಲಾಗಿದ್ದು, ಕರಿಯ(75), ಗೌರಿ(70), ನಾಗಿ(35), 6 ವರ್ಷದ ಕಾವೇರಿ ಹತ್ಯೆಗೀಡಾದವರು. ಆರೋಪಿ ಗಿರೀಶ್ (35) ನಿಂದ ಭೀಕರ ಕೃತ್ಯ ಎಸಗಿದ್ದು, ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.