ನೀವು ಬ್ರೌನ್ ಬ್ರೆಡ್ ಪ್ರಿಯರಾಗಿದ್ದರೆ, ಅದರ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳಿವೆ. ನಿಮಗೆ ಯಾವ ರೀತಿ ಇದು ಪ್ರಯೋಜನ ನೀಡುತ್ತದೆ ಎನ್ನುವುದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಬ್ರೌನ್ ಬ್ರೆಡ್ ಅನ್ನು ಗೋಧಿ ಹಿಟ್ಟು, ನೀರು, ಉಪ್ಪು, ಸಕ್ಕರೆ ಮತ್ತು ಯೀಸ್ಟ್ ಬಳಸಿ ತಯಾರಿಸಲಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ಇದು ಆರೋಗ್ಯಕ್ಕೆ ಒಳ್ಳೆಯದಾದರೂ, ಇದನ್ನು ಸೇವಿಸುವ ಮೊದಲು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳಿವೆ.
ಬ್ರೌನ್ ಬ್ರೆಡ್ ಒಂದು ರೀತಿಯ ಬ್ರೆಡ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಹೆಚ್ಚು ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಬಿಳಿ ಬ್ರೆಡ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಆದ್ದರಿಂದ, ಧಾನ್ಯದಲ್ಲಿ ಕಂಡುಬರುವ ಕೆಲವು ಪೌಷ್ಟಿಕಾಂಶದ ಅಂಶಗಳ ಕೊರತೆ ಅದರಲ್ಲಿರುತ್ತದೆ. ಬ್ರೌನ್ ಬ್ರೆಡ್ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ.
ಬಿಳಿ ಬ್ರೆಡ್‌ಗೆ ಹೋಲಿಸಿದರೆ ಬ್ರೌನ್ ಬ್ರೆಡ್ ಉತ್ತಮವಾಗಿದೆ. ಸಂಪೂರ್ಣ ಗೋಧಿ ಹೊಂದಿರುವ ಬ್ರೌನ್ ಬ್ರೆಡ್ ಹೆಚ್ಚು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ
ಬ್ರೌನ್ ಬ್ರೆಡ್ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಆಯ್ಕೆಯಾಗಿದೆ.
ಬ್ರೌನ್ ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಬ್ರೌನ್ ಬ್ರೆಡ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಧಾನ್ಯಗಳಿರುವ ಆಹಾರ ಪದಾರ್ಥಗಳು ಮೆದುಳಿನಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತವೆ.
ಬ್ರೌನ್ ಬ್ರೆಡ್ ನೈಸರ್ಗಿಕ ವಿರೇಚಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.
ಬ್ರೌನ್ ಬ್ರೆಡ್‌ನಲ್ಲಿರುವ ಧಾನ್ಯಗಳು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಬ್ರೌನ್ ಬ್ರೆಡ್ ದೇಹಕ್ಕೆ ಹಲವಾರು ವಿಟಮಿನ್ಗಳು ಮತ್ತು ಖನಿಜಗಳನ್ನು ನೀಡುತ್ತದೆ.
ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಅನೇಕ ವಿಧದ ಬ್ರೆಡ್ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೀಗಾಗಿ, ಬ್ರೌನ್ ಬ್ರೆಡ್ ಉತ್ತಮ ಆಯ್ಕೆ.