ಹಾವೇರಿ: ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಶಿವಾನಂದ ಕುನ್ನೂರು (40) ಕೊಲೆಯಾದ ಪ್ರಥಮ ದರ್ಜೆಯ ಗುತ್ತಿಗೆದಾರನಾಗಿದ್ದು, ಆರೋಪಿಗಳು ಶಿವಾನಂದನ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಶಿಗ್ಗಾಂವ್ ಪಟ್ಟಣದ ಹೊರವಲಯದ ಈ ಘಟನೆ ನಡೆದಿದ್ದು, ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದಾರೆ ಎಂದು ಮೃತನ ಸಂಬಂಧಿಕರು ಹೇಳಿದ್ದಾರೆ.
ಸುಪಾರಿ ಕೊಟ್ಟು ಕೊಲೆ ಮಾಡಿಸಿರೋ ಶಂಕೆಯನ್ನು ಶಿವಾನಂದ ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶಿಗ್ಗಾಂವ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ
ಸ್ಥಳದಲ್ಲಿ ದೇಹದಿಂದ ರಕ್ತದ ಕೋಡಿ ಹರಿದಿದ್ದು, ಕುತ್ತಿಗೆಯ ಮಾಂಸಖಂಡಗಳು ಹೊರಬಂದಿರುವುದು ಕೊಲೆಯ ಭೀಕರತೆಗೆ ಸಾಕ್ಷಿಯಾಗಿದೆ. ಸ್ಥಳಕ್ಕೆ ಎಸ್ಪಿ ಅಂಶುಕುಮಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ದೌಡಾಯಿಸಿ ಪರಿಶೀಲಿಸಿದರು.
ಇನ್ನೂ ಈ ಹತ್ಯೆ ಪ್ರಕರಣದ ಐವರು ಆರೋಪಿಗಳಲ್ಲಿ ಪ್ರಮುಖನಾದ ನಾಗರಾಜ ಸವದತ್ತಿ ಮನೆಗೆ ಬೆಂಕಿ ಹಚ್ಚಲಾಗಿದೆ. ಗುತ್ತಿಗೆದಾರ ಶಿವಾನಂದ ಕಡೆಯವರೇ ಪ್ರತೀಕಾರವಾಗಿ ಬೆಂಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಗ್ಗಾಂವಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು, ನೋವು ಸಂಭವಿಸಿಲ್ಲ.