ರಾಯಚೂರು: ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ತಮ್ಮ ಕುಟುಂಬದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದರು.
ಮಠದ ಅಧಿಕಾರಿಗಳು ಅವರನ್ನು ಸ್ವಾಗತಿಸಿ ರಾಯರ ದರ್ಶನಕ್ಕೆ ಕರೆದೊಯ್ದರು. ನಂತರ, ಪರಮಪೂಜ್ಯ ಸ್ವಾಮೀಜಿ ಅವರು ಶೇಷವಸ್ತ್ರ, ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು. ರಾಯರ ವೃಂದಾವನ, ಮಂಚಾಲಮ್ಮ ದೇವಿಗೆ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ರಾಯರ ದರ್ಶನದ ಬಳಿಕ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರನ್ನು ಭೇಟಿಯಾಗಿ ಮೊಮ್ಮಗನ ಮದುವೆ ಆಹ್ವಾನಿಸಿದರು. ಈ ವೇಳೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಹುಬ್ಬಳ್ಳಿಯಲ್ಲಿ ಕರಾವಳಿ ಉತ್ಸವ ; ಇಂದಿನಿಂದ 50 ಮಳಿಗೆಗಳಲ್ಲಿ ವಸ್ತು ಪ್ರದರ್ಶನ, ಮಾರಾಟ – ದಿನೇಶ್ ಶೆಟ್ಟಿ