ಬೆಂಗಳೂರು:-ಇದ್ದಾಗಂತೂ ನೆಮ್ಮದಿ ಇಲ್ಲ, ಸತ್ತಮೇಲಾದರೂ ನೆಮ್ಮಲಿ ಸಿಗಲಿ ಅಂತ ಜನ ಮಾತಿಗೆ ಹೇಳ್ತಾರೆ. ಆದ್ರೆ ಇಲ್ಲಿ ಜನಗಳ ಪರಿಸ್ಥಿತಿ ಹೇಗಾಗಿದೆ ಅಂದರೆ ಸತ್ತ ಮೇಲೂ ನೆಮ್ಮದಿ ಇಲ್ಲ ಎನ್ನವಂತಾಗಿದೆ.
ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವ ಸಂತೋಷ್ ಲಾಡ್
ಎಸ್, ಇತ್ತೀಚಿನ ದಿನಗಳಲ್ಲಿ ಬ್ರೋಕರ್ ಗಳ ಹಾವಳಿ ಮಿತಿಮೀರಿ ಹೋಗಿದೆ. ಎಲ್ಲೆಲ್ಲೂ ನಾವೇ ಇದ್ದೀವಿ ಎನ್ನುವಂತೆ ಎಲ್ಲಾ ಕಡೆ ಸುತ್ತು ವರೆದಿದ್ದಾರೆ. ಅದರಂತೆ ಸ್ಮಶಾನದಲ್ಲಿಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು.
ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.
ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ. ಬ್ರೋಕರ್‌ಗಳೇ ಈ ಶಾಕಿಂಗ್ ವಿಚಾರವನ್ನು ತಿಳಿಸಿದ್ದಾರೆ.