ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಹೊಡೆಯಿತು. ಕಠಿಣ ಮೊತ್ತವಾದರೂ ಇನ್ನೂ 4 ಎಸೆತ ಬಾಕಿ ಇರುವಂತೆ ಗುಜರಾತ್ 3 ವಿಕೆಟ್ ಕಳೆದುಕೊಂಡು 204 ರನ್ ಹೊಡೆದು ಜಯಗಳಿಸಿತು.
ನಾಯಕ ಶುಭಮನ್ ಗಿಲ್ 7 ರನ್ ಗಳಿಸಿ ಔಟಾದಾಗ ಗುಜರಾತ್‌ಗೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಎರಡನೇ ವಿಕೆಟಿಗೆ ಸಾಯಿ ಸುದರ್ಶನ್ ಮತ್ತು ಬಟ್ಲರ್ 35 ಎಸೆತಗಳಲ್ಲಿ 60 ರನ್ ಹೊಡೆಯುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಸಾಯಿ ಸುದರ್ಶನ್ 36 ರನ್ (21 ಎಸೆತ, 5 ಬೌಂಡರಿ, 1 ಸಿಕ್ಸ್ )ಸಿಡಿಸಿ ಔಟಾದರು.
ಮೂರನೇ ವಿಕೆಟಿಗೆ ಬಟ್ಲರ್ ಮತ್ತು ರುದರ್‌ರ್ಫೋರ್ಡ್ 69 ಎಸೆತಗಳಲ್ಲಿ 119 ರನ್ ಚಚ್ಚುವಾಗಲೇ ಗುಜರಾತ್ ಗೆಲುವು ಖಚಿತವಾಯಿತು.