Close Menu
Ain Live News
    Facebook X (Twitter) Instagram YouTube
    Thursday, June 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Health Benefits: ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಹಾಲನ್ನು ಸೇವಿಸಬಹುದೇ? ಇಲ್ಲಿದೆ ಉತ್ತರ

    By AIN AuthorDecember 8, 2023
    Share
    Facebook Twitter LinkedIn Pinterest Email
    Demo

    ಆಹಾರತಜ್ಞರ ಪ್ರಕಾರ ದಿನದ ಮೊದಲ ಆಹಾರವಾಗಿ ಸೇವಿಸಲು ಲಿಂಬೆ ಬೆರೆಸಿದ ನೀರು ಅಥವಾ ಸೇಬಿನ ಶಿರ್ಕಾ ಬೆರೆಸಿದ ನೀರು ಅಥವಾ ಎಳನೀರು ಕುಡಿಯುವುದು ಅತ್ಯುತ್ತಮ ಆಯ್ಕೆಗಳಾಗಿವೆ. ನಂತರ ಸೇವಿಸುವ ಆಹಾರಗಳಿಗೆ ನೀವು ಹಾಲನ್ನು ಬೆರೆಸಿ ಸೇವಿಸಬಹುದು. ಏಕೆಂದರೆ ಲಿಂಬೆನೀರು ಅಥವಾ ಎಳನೀರು ದೇಹದ ಕಲ್ಮಶಗಳನ್ನು ನಿವಾರಿಸಲು ಮತ್ತು ದೇಹಕ್ಕೆ ಅಗತ್ಯವಿರುವ ನೀರಿನ ಅಂಶವನ್ನು ನೀಡಲು ಸಮರ್ಥವಾಗಿವೆ. ಹಾಲು ಈ ಕಾರ್ಯಗಳನ್ನು ನಿರ್ವಹಿಸಲಾರದು.

    ತಜ್ಞರು ಸಲಹೆ ನೀಡುವ ಪ್ರಕಾರ ದಿನದ ಮೊದಲ ಆಹಾರವಾಗಿ ದೇಹವನ್ನು ಕಲ್ಮಶರಹಿತವಾಗಿಸಲು ಸಹಕರಿಸುವ ದ್ರವಾಹಾರವನ್ನು ಸೇವಿಸಬೇಕು ಹಾಗೂ ಈ ಕಾರ್ಯವನ್ನು ನಿರ್ವಹಿಸಲು ಸುಮಾರು ಮುಕ್ಕಾಲು ಘಂಟೆಯಾದರೂ ಹಾಗೇ ಬಿಡಬೇಕು. ಲಿಂಬೆನೀರಿನ ಬದಲಿಗೆ ಮಜ್ಜಿಗೆ ಅಥವಾ ಛಾಂಛ್ ಸುಲಭ ದ್ರವಾಹಾರಗಳಾಗಿವೆ. ಇವುಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಸುಲಭವಾಗುತ್ತದೆ.

    ಖಾಲಿಹೊಟ್ಟೆಯಲ್ಲಿ ಹಾಲು ಪ್ರಥಮ ಆಹಾರವಾಗಿ ಸೇವಿಸುವುದು ಯಾರಿಗೂ ತರವಲ್ಲ. ಇದು ನಿಮ್ಮ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ವಾತ ಪ್ರಕೃತಿಯ ವ್ಯಕ್ತಿಯಾಗಿದ್ದರೆ (ವಾಯು) ಅಥವಾ ಕಫ ಪ್ರಕೃತಿಯವರಾಗಿದ್ದರೆ (ನೀರು) ಎಂದಿಗೂ ನೀವು ಖಾಲಿಹೊಟ್ಟೆಯಲ್ಲಿ ಹಾಲನ್ನು ಸೇವಿಸಬಾರದು. ಯಾರಿಗೆ ಕೆಮ್ಮು ಮತ್ತು ಶೀತ, ಫ್ಲೂ ಮೊದಲಾದ ತೊಂದರೆಗಳು ಸುಲಭವಾಗಿ ಎದುರಾಗುತ್ತವೆಯೋ ಆ ವ್ಯಕ್ತಿಗಳೂ ಬೆಳಿಗ್ಗಿನ ಅಹಾರವಾಗಿ ಹಾಲನ್ನು ಸೇವಿಸಬಾರದು.

     ಅತಿಯಾದ ಆಮ್ಲೀಯತೆಯ ಗುಣವಿರುವ ವ್ಯಕ್ತಿಗಳು ತಣ್ಣನೆಯ ಹಾಲನ್ನು ಸೇವಿಸಬಹುದು. ಹಾಲಿನಲ್ಲಿರುವ ಕ್ಯಾಲ್ಸಿಯಂ ಆಮ್ಲದೊಂದಿಗೆ ಬೆರೆತು ಉಪ್ಪಾಗಿಸುವ ಕಾರಣ ಅಲ್ಪ ಮಟ್ಟದ ಆಮ್ಲೀಯತೆಯನ್ನು ಗುಣಪಡಿಸಲು ನೆರವಾಗುತ್ತದೆ. ವಾತ ಪ್ರಕೃತಿಯ ವ್ಯಕ್ತಿಗಳು ದಿನದ ಇತರ ಹೊತ್ತಿನಲ್ಲಿ ಬೆಲ್ಲದೊಂದಿಗೆ ಹಾಲನ್ನು ಸೇವಿಸಿದರೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ.

    * ಬರೆಯ ನೀರು, ಉಗುರು ಬೆಚ್ಚಗಿದ್ದರೆ ಸಾಕು. ಅತಿ ತಣ್ಣಗೂ ಇರಬಾರದು, ಅತಿ ಬಿಸಿಯೂ ಇರಬಾರದು. ಸುಮಾರು ಎರಡು ಲೋಟ

    * ಎಳನೀರು. ಒಂದು ಮಧ್ಯಮ ಗಾತ್ರದ ಎಳನೀರು. ಈಗ ತಾನೇ ಕೆತ್ತಿದ ಎಳನೀರಿನಿಂದ ಸಂಗ್ರಹಿಸಿದ ನೀರು

    * ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ ಸೇಬಿನ ಶಿರ್ಕಾ(apple cidar vinegar) ಬೆರೆಸಿದ ನೀರು

    * ಒಂದು ಟೀ ಬ್ಯಾಗ್ ಹಸಿರು ಟೀ ಕುದಿಸಿದ ನೀರನ್ನು ತಣಿಸಿ ಕುಡಿಯುವುದು

    * ಒಂದು ಲೋಟ ನೀರಿಗೆ ದೊಡ್ಡದಾದರೆ ಅರ್ಧ, ಚಿಕ್ಕದಾದರೆ ಒಂದು ಲಿಂಬೆಯ ರಸ ಬೆರೆಸಿದ ನಿರು

    * ಈ ನೀರಿಗೆ ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿಯೂ ಸೇವಿಸಬಹುದು

    * ಆಮ್ಲೀಯತೆಯ ತೊಂದರೆ ಇರುವ ವ್ಯಕ್ತಿಗಳು ಕೊಂಚ ಹಸಿಶುಂಠಿ ಕುದಿಸಿ ತಣಿಸಿದ ನೀರನ್ನು ಕುಡಿಯಬಹುದು

    * ಹೊಟ್ಟೆಯಲ್ಲಿ ಗುಡುಗುಡು, ಉರಿ, ಕರುಳಿನ ಹುಣ್ಣು ಇರುವ ವ್ಯಕ್ತಿಗಳು ಒಂದು ಚಿಕ್ಕ ಚಮಚ ಲೋಳೆಸರ (ಆಲೋವೆರಾ) ತಿರುಳನ್ನು ಬೆರೆಸಿದ ನೀರನ್ನು ಕುಡಿಯಬಹುದು.

     

    Demo
    Share. Facebook Twitter LinkedIn Email WhatsApp

    Related Posts

    ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತದೆಯೇ?: ಹಾಗಿದ್ರೆ ಈ ಸಲಹೆ ಅನುಸರಿಸಿ!

    June 25, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಟೊಮೆಟೋ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಇದೆ ಗೊತ್ತಾ?

    June 25, 2025

    ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯಾ? ಹಾಗಾದ್ರೆ ಈ ಇದನ್ನು ಒಮ್ಮೆ ಟ್ರೈ ಮಾಡಿ!

    June 25, 2025

    ತಲೆಯಲ್ಲಿ ವಿಪರೀತ ಹೇನಿದ್ಯಾ? ಹಾಗಿದ್ರೆ ಹೀಗೆ ಮಾಡಿ, ತಕ್ಷಣವೇ ಒಂದೂ ಉಳಿಯದಂತೆ ಉದುರಿಹೋಗುತ್ತೆ!

    June 25, 2025

    ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ

    June 25, 2025

    ಅಬ್ಬಬ್ಬಾ.. ಜನರು ಹೆಚ್ಚು ಖರ್ಚು ಮಾಡೋದು ಇದಕ್ಕೇನಾ..? ವರದಿಯಲ್ಲಿ ಶಾಕಿಂಗ್ ವಿಷಯ ಬಯಲು

    June 25, 2025

    ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ..!

    June 25, 2025

    ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದೇ? ತಜ್ಞರು ಹೇಳಿದಿಷ್ಟು!

    June 24, 2025

    ಮೊಡವೆಯಿಂದ ಮುಖದ ಕಳೆ ಕುಂದಿದ್ಯಾ!? ಹಾಗಿದ್ರೆ ವಾರ ಪೂರ್ತಿ ಹೀಗೆ ಮಾಡಿ!

    June 24, 2025

    ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸರಿಯೋ ತಪ್ಪೋ? ತಜ್ಞರು ಹೇಳೋದು ಹೀಗೆ

    June 24, 2025

    Healthy Food: ಎಲ್ಲಕ್ಕಿಂತ ಮಿಗಿಲು ಆರೋಗ್ಯ ಸಂಪತ್ತು; ಮೆಂತ್ಯ ನೀರು ಕುಡಿದ್ರೆ ಸಿಗುತ್ತೆ ಸೂಪರ್ ಪ್ರಯೋಜನಗಳು..!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.