ಲಕ್ನೋ ಹೋಮ್ಗ್ರೌಂಡ್ನಲ್ಲಿ ನಿನ್ನೆ ಡೆಲ್ಲಿಯ ಆರ್ಭಟ ಜೋರಾಗಿತ್ತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಪಂದ್ಯವು ಹೀಗೆ ನಡೆಯುತ್ತದೆ, ಹೀಗೆ ಆಗುತ್ತದೆ ಎಂದು ಯಾರನ್ನೂ ದೂರನ್ನು ಸಾಧ್ಯವಿಲ್ಲ. ಏಕೆಂದರೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಹೀಗಾಗಿ ನಾವು ಸೋಲನುಭವಿಸಿದ್ದೇವೆ ಎಂದರು.
ಲಕ್ನೋ ಪಂದ್ಯಗಳಲ್ಲಿ ಟಾಸ್ ದೊಡ್ಡ ಪಾತ್ರ ವಹಿಸುತ್ತಿದೆ. ಹೀಗಾಗಿ ಸೋಲಿಗೆ ನಾನು ನೆಪಗಳನ್ನು ಹುಡುಕುತ್ತಿಲ್ಲ. ಇದಾಗ್ಯೂ ನಾವು ಈ ಪಂದ್ಯದಲ್ಲಿ 20 ರನ್ಗಳನ್ನು ಕಡಿಮೆ ಕಲೆಹಾಕಿದ್ದೆವು. ಇದು ಸಹ ಒಂದು ಕಾರಣ ಎಂದು ರಿಷಭ್ ಪಂತ್ ಹೇಳಿದ್ದಾರೆ.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಇನ್ನು ನೀವೇಕೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಂತ್, ನಾವು ಸಂದರ್ಭಗಳ ಲಾಭವನ್ನು ಪಡೆಯಲು ಬಯಸಿದ್ದೆವು. ಅದಕ್ಕಾಗಿ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಈ ಪಿಚ್ನ ಸಂಪೂರ್ಣ ಲಾಭ ಪಡೆಯಲು ನಾವು ಅಬ್ದುಲ್ ಸಮದ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳಿಸಿದೆವು. ಆ ಬಳಿಕ ಡೇವಿಡ್ ಮಿಲ್ಲರ್ಗೆ ಅವಕಾಶ ನೀಡಿದೆವು. ಆದರೆ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿ ಬಂದಿರಲಿಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ.
ಇಲ್ಲಿ ರಿಷಭ್ ಪಂತ್ ತನ್ನ ಸಾಮರ್ಥ್ಯವನ್ನು ಕೆಳದರ್ಜೆಗೆ ಇಳಿಸಿದ್ರಾ? ಅಥವಾ ಅವರಿಗಿಂತ ತಾನು ಕೆಳಮಟ್ಟದ ಬ್ಯಾಟರ್ ಎಂಬುದನ್ನು ಸಾರಿದ್ರಾ ಎಂಬುದೇ ಪ್ರಶ್ನೆ. ಏಕೆಂದರೆ ಇದಕ್ಕೂ ಮುನ್ನ ರಿಷಭ್ ಪಂತ್ ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದೀಗ 7ನೇ ಕ್ರಮಾಂಕದಲ್ಲೇಗೆ ಬ್ಯಾಟ್ ಬೀಸಿದ್ದೀರಿ ಎಂಬ ಪ್ರಶ್ನೆಗೆ ವಿಚಿತ್ರ ಉತ್ತರ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.