ಕಲಬುರಗಿ: ಬೀದರ್, ಶಿವಮೊಗ್ಗದಲ್ಲಿ ಸಿಇಟಿ ಬರೆಯಲು ಜನಿವಾರ ತೆಗೆಸಿದ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೆ ಜನಿವಾರ ವಿವಾದ ಭುಗಿಲೆದ್ದಿದೆ. ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆದು ಬಾ ಅಂತ ಹೇಳಿದ್ದು ಮತ್ತೇ ಬ್ರಾಹ್ಮಣ ಸಮಾಜ ಕೆರಳಿಸುವಂತೆ ಮಾಡಿದೆ. ಸಮುದಾಯದ ಪ್ರತಿಭಟನೆ ಬಳಿಕ ಪೊಲೀಸರು ಇಬ್ಬರು ನೀಟ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಲಬುರಗಿ ನಗರ ಪೊಲೀಸ್ ಕಮಿಷನರ್ ಎಸ್.ಡಿ.ಶರಣಪ್ಪ, ಪರೀಕ್ಷಾ ಕೇಂದ್ರದ ಸಿಬ್ಬಂದಿಯಾದ ಶರಣಗೌಡ, ಗಣೇಶ ಬಂಧಿತರು. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 298 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.
Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!
ಶರಣಗೌಡ, ಗಣೇಶ ಇಬ್ಬರು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಸಿಬ್ಬಂದಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಎಂದು ಮಾಹಿತಿ ಅವರು ನೀಡಿದ್ದಾರೆ.
ಕಲಬುರಗಿಯ ಸೇಂಟ್ ಮೇರಿ ಕಾಲೇಜಿನಲ್ಲಿ ನಿನ್ನೆ ಜನಿವಾರ ತೆಗೆಸಿ ಪರೀಕ್ಷೆ ಬರೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಪಾದ್ ಪಾಟೀಲ್ ಅನ್ನೋ ಅಭ್ಯರ್ಥಿಯ ಜನಿವಾರ ತೆಗೆಸಿ ಒಳಗೆ ಬಿಟ್ಟಿದ್ದಾರೆ. ಇದು ಗೊತ್ತಾಗ್ತಿದ್ದಂತೆ ಆಕ್ರೋಶಗೊಂಡ ಬ್ರಾಹ್ಮಣ ಸಮುದಾಯದವರು, ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ಮಾಡಿದ್ದರು. ಜನಿವಾರ ತೆಗೆಸಿದವರನ್ನ ಅಮಾನತು ಮಾಡಬೇಕು ಅಂತಾ ಪಟ್ಟು ಹಿಡಿದ ಪ್ರತಿಭಟನಾಕಾರರು, ಪರೀಕ್ಷೆ ಮುಗಿಯುವವರೆಗೂ ಅಲ್ಲೇ ಹೋರಾಟ ಮಾಡಿದ್ದರು.