ಬೆಂಗಳೂರು:- ಕರ್ನಾಟಕ ಸೇರಿ ದೇಶದಾದ್ಯಂತ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ದುಪ್ಪಟ್ಟು ಮಾಡಿದೆ. ಅದರಲ್ಲೂ ಕೋವಿಡ್ ಸೋಂಕಿಗೆ ರಾಜಧಾನಿ ಬೆಂಗಳೂರೇ ಹಾಟ್ಸ್ಪಾಟ್ ಆಗುತ್ತಿರುವುದು ನಿದ್ದೆಗೆಡಿಸಿದೆ.
ಮುಂದುವರಿದ ಮಳೆ ಅವಾಂತರ: 80 ವರ್ಷದ ಹಳೇ ಶಾಲಾ ಕಟ್ಟಡ ದಿಢೀರ್ ಕುಸಿತ.. ತಪ್ಪಿದ ಅನಾಹುತ!
ರಾಜ್ಯದಲ್ಲಿ ದಾಖಲಾಗುವ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 75 ಕ್ಕಿಂತ ಹಚ್ಚು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಸಕ್ರಿಯ ಪ್ರಕಣಗಳಲ್ಲಿಯೂ ಬೆಂಗಳೂರೇ ಸಿಂಹಪಾಲು ಹೊಂದಿದೆ. ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಪ್ರತಿ ದಿನ 36 ಕ್ಕೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ 25 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ರಾಜಧಾನಿಯಲ್ಲಿಯೇ ಗರಿಷ್ಠ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.