ವಿಜಯಪುರ:- ಜನಗಣತಿಯ ಜೊತೆ ಜಾತಿ ಗಣತಿ ನಡೆಸಲು ತೀರ್ಮಾನಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಐತಿಹಾಸಿಕ ತೀರ್ಮಾನ ಸ್ವಾಗತಾರ್ಹ ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.
ಕಬ್ಬೂರ ಪಟ್ಟಣ ಪಂಚಾಯತಿ ಮುಖ್ಯಧಿಕಾರಿಯಿಂದ ತುಘಲಕ್ ಆಡಳಿತ: ಕಚೇರಿಗೆ ಬೀಗ ಜಡಿದ ಸಾರ್ವಜನಿಕರು!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ರಾಹುಲ್ ಗಾಂಧಿ ಜನಗಣತಿ ಆಗಬೇಕು ಅಂತಾ ಹೇಳಿದ್ರೂ. ಅದೇ ರೀತಿ ಪ್ರಧಾನಿ ಮೋದಿ ಅವರು ಜನಗಣತಿ ಜೊತೆಗೆ ಜಾತಿ ಗಣತಿ ಮಾಡ್ತೆವೆ ಅಂತಾ ಹೇಳಿದ್ದಾರೆ. ಈ ಐತಿಹಾಸಿಕ ತೀರ್ಮಾನವನ್ನ ನಾವು ಸ್ವಾಗತಿಸುತ್ತೇವೆ. ಸಂಪತ್ತು ಯಾರೊಬ್ಬರ ಸ್ವತ್ತು ಆಗಬಾರದು. ಎಲ್ಲರಿಗೂ ಸಂಪತ್ತು ಸಮಾನಾಗಿ ಹಂಚಿಕೆ ಆಗಬೇಕು.
ಹಾವನೂರು ವರದಿ ಬಂದಾಗ ಕೂಡ ಅದನ್ನ ಯಾರು ಒಪ್ಪಲಿಲ್ಲ. ಯಾವಾಗಲು ಕೂಡ ವಿರೋಧ ಮಾಡುವವರು ಇದ್ದೇ ಇರ್ತಾರೆ. ಇದಕ್ಕೆ ಆಳುವ ದೊರೆ ಮಣೆ ಹಾಕಬಾರದು. ದೇವರಾಜ ಅರಸು ಅವರಿಗೂ ಅನೇಕ ವಿರೋಧ ವ್ಯಕ್ತವಾಗಿದ್ದವು. ಆದ್ರೆ ಅವರು ದಿಟ್ಟವಾಗಿ ಜಾರಿಗೆ ತರಲಿಲ್ಲವೇ. ಅದೆ ರೀತಿ ಸಿಎಂ ಕೂಡ ದಿಟ್ಟ ನಿರ್ಧಾರ ತಗೆದುಕೊಂಡು ಜಾರಿಗೆ ತರಬೇಕು. ಇದನ್ನ ವೀರಶೈವರು ಒಪ್ಪಬೇಕು, ಲಿಂಗಾಯತರು ಒಪ್ಪಬೇಕು.ಎಲ್ಲಿ ಆದ್ರೂ ಅನ್ಯಾಯ ಆಗಿದ್ರೆ ಹೇಳೀ ಸರಿಪಡಿಸೋಣ ಎಂದರು.
ಹೊಸ ಹುದ್ದೆ ತುಂಬಲಾರದ ವಿಚಾರವಾಗಿ ಮಾತನಾಡಿ, ಕಳೆದ ಅಕ್ಟೋಬರ್ 28 ತಾರಿಖಿಗೆ ಒಳಮೀಸಲಾತಿಯನ್ನ ನಾವು ಜಾರಿಗೆ ತರ್ತೆವೆ ಅಂತಾ ಸರಕಾರ ತೀರ್ಮಾನ ತಗೆದುಕೊಂಡಿತ್ತು. ಅದರ ಜೊತೆಗೆ ನಾವು ಒತ್ತಡ ಹಾಕಿ ಆ ದಿನಾಂಕದಿಂದ ಈ ರಾಜ್ಯದಲ್ಲಿ ಯಾವುದೆ ಹೊಸ ಹುದ್ದೆಯನ್ನ ತುಂಬಿಕೊಳ್ಳಬಾರದು. ಎಲ್ಲ ಪೋಸ್ಟ್ ಗಳನ್ನ ಸ್ಥಗಿತಗೊಳಿಸಬೇಕು
ಒಳಮೀಸಲಾತಿ ಅನುಷ್ಠಾನ ಆದ ನಂತರ ಹುದ್ದೆಗಳನ್ನ ತುಂಬಬೇಕು ಅಂತಾ ಒತ್ತಡ, ಷರತ್ತು ಹಾಕಿದ್ವಿ, ಅದಕ್ಕೆ ಯಾವುದೆ ಹುದ್ದೆ ಭರ್ತಿ ಆಗಿಲ್ಲ. ಬ್ಯಾಕ್ ಲಾಗ್ ಹುದ್ದೇ ತುಂಬಿಕೊಳ್ಳುವದು ನಿಲ್ಲಿಸಿದ್ದೇವೆ. ಜೂನ್ ತಿಂಗಳಲ್ಲೆ ಜಾರಿ ಆಗಬೇಕು. ಇಲ್ಲವಾದ್ರೆ ಮುಂದೆ ಏನ ಮಾಡಬೇಕು ಅಂತಾ ನಾವು ಈಗಾಗಲೆ ಯೋಚಿಸಿದ್ದೇವೆ, ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.