ಹುಬ್ಬಳ್ಳಿ: ಜಾತಿ ಗಣತಿ ಹತ್ತು ವರ್ಷಗಳ ಕಾಲ ಹಳೆಯದು ಇದನ್ನು ನಾವು ಒಪ್ಪಲ್ಲ. ಈ ಕುರಿತು ಎಲ ಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು ಜಾತಿಗಣತಿ ವಿರೋಧಿಸಿದ್ದಾರೆ. ಇದೊಂದು ಹಳೆ ಜಾತಿ ಗಣತಿ ವರದಿ ಆಗಿದ್ದು ಇದು ಈಗ ಜಾರಿ ಮಾಡುವುದು ಸರಿಯಾಗಿ ಕ್ರಮವಲ್ಲ. ಯಾವುದೇ ರೀತಿಯಲ್ಲೂ ಸಹ ಸರಿಯಾಗಿ ಜಾತಿ ಗಣತಿ ಮಾಡಿಲ್ಲ. ಒಂದು ಕಡೆ ಲಿಂಗಾಯತರು, ಇನ್ನೊಂದು ಕಡೆ ಒಕ್ಕಲಿಗರು ಇದಕ್ಕೆ ವಿರೋಧ ಮಾಡಿದ್ದಾರೆ. ಆದ್ದರಿಂದ ಜಾತಿ ಗಣತಿ ಜಾರಿ ಮುನ್ನ ಸರ್ವ ಪಕ್ಷಗಳ ಸಭೆ ಮಾಡಲಿ, ಎಲ್ಲರ ಸಲಹೆ ಸೂಚನೆಗಳನ್ನು ಪಡೆಯಬೇಕು. ಇದನ್ನ ಕೂಡಲೇ ಕೈ ಬಿಡಬೇಕು. ಇದಕ್ಕೆ ಬಿಜೆಪಿ ಸಹಮತ ಇಲ್ಲ ಎಂದರು.
ಮತ್ತೆ ಮುಂದಕ್ಕೆ ಹೋಯ್ತು ಜಾತಿಗಣತಿ: ಏ.17ರಂದು ವಿಶೇಷ ಸಂಪುಟ ಸಭೆಗೆ ನಿರ್ಧಾರ
ಕಚ್ಛಾ ತೈಲ, ಸಿಲಿಂಡರ್, ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಕೇಂದ್ರವರು ಎನ್ನುತ್ತಾರೆ ಕಾಂಗ್ರೆಸ್ ನವರ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಏನು ಮಾಡಿದೆ. ಎಲ್ಲರೂ ಗೊತ್ತಿದ್ದ ವಿಚಾರ ಆಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ತತ್ತವರಿಸುವಂತೆ ಮಾಡಿದ. ಒಟ್ಟು 48 ವಸ್ತುಗಳ ಹಾಗೂ ಯೋಜನೆ ಮೇಲೆ ಏರಿಕೆ ಮಾಡಿದ್ದು, ನೀರು, ಹಾಲು, ವಿದ್ಯುತ್, ರೈತರ ಟಿಸಿ ,ಕಸದ ಮೇಲೋ ಸಹ ಏರಿಕೆ ಮಾಡಿದೆ. ಪಹಣಿ , ಜನನ ಮರಣ ಪತ್ರಗಳ ಮೇಲೆ ಸಹ ದರ ಏರಿಕೆ ಮಾಡಿದೆ ಎಂದರು.