ವಿಜಯಪುರ : ಸಚಿವ ಸಂಪುಟದಲ್ಲಿ ಜಾತಿ ಗಣತಿ ಮಂಡನೆ ವಿಚಾರವಾಗಿ ವಿಜಯಪುರ ನಗರದಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಕಾಪಿ ತರಿಸಿಕೊಂಡಿದ್ದೇನೆ ಅದನ್ನು ನೋಡಿ ಹೇಳುವೆ. ಜಾತಿ ಗಣತಿ ವರದಿಯ ಅಧ್ಯಯನ ಮಾಡಿ ನಾವು ಅರ್ಥ ಮಾಡಿಕೊಳ್ಳಬೇಕು. ಜಾತಿಗಣತಿ ವರದಿಯ ವಿಚಾರವಾಗಿಯೇ ವಿಶೇಷ ಸಭೆ ಎಪ್ರಿಲ್ 17ರಂದು ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಚಾರವೊಂದೇ ಚರ್ಚೆಯಾಗಲಿದೆ. ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ಹೇಳುತ್ತೇವೆ ಎಂದರು.
ಜಾತಿಗಣತಿ ವರದಿ ಸಂಪುಟದಲ್ಲಿ ಮಂಡನೆಯಾಗಿದೆ, ಚರ್ಚೆಯಾಗಿಲ್ಲ ; ಗೃಹ ಸಚಿವ ಜಿ.ಪರಮೇಶ್ವರ್
ಇನ್ನೂ ಜಾತಿಗಣತಿ ಸರಿಯಾಗಿಲ್ಲ ಮತ್ತೊಮ್ಮೆ ಜಾತಿ ಗಣತಿ ಮಾಡಬೇಕೆಂದು ವಿವಿಧ ಸ್ವಾಮೀಜಿಗಳ ಬೇಡಿಕೆ ವಿಚಾರವಾಗಿ ಅದು ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟದ್ದು ಎಂದರು. ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿರುವ ವಿಚಾರವಾಗಿ ಮಾತನಾಡಿ 2 ಎ ಮೀಸಲಾತಿಗಾಗಿ ಹಿಂದೂ ಸಾದರ, ಹಿಂದೂ ಗಾಣಿಗ ಹಿಂದೂ ಬಣಜಿಗೆ ಎಂದು ನಮೂದು ಮಾಡಲಾಗಿದೆ. ಲಿಂಗಾಯತ ಸಮಾಜದಲ್ಲಿ ಇವೆಲ್ಲ ಸಮುದಾಯ ಬಂದಿಲ್ಲ. ಇವೆಲ್ಲ ಸಮುದಾಯಗಳು ಒಳಗೊಂಡರೆ ಲಿಂಗಾಯತ ಸಮಾಜದ ಸಂಖ್ಯೆ ಒಂದು ಕೋಟಿಗೂ ಅಧಿಕ ಆಗುತ್ತದೆ. ಇದು ಗಾಣಿಗ ಹಿಂದೂ ಬಣಜಿಗ, ಹಿಂದೂ ಸಾಗರ ಈ ಸಮಾಜಗಳನ್ನ 3ಬಿ ದಲ್ಲಿ ಸೇರಿಸಬೇಕಾ. 2ಎ ದಲ್ಲಿ ಮುಂದುವರೆಸಿಕೊಂಡು ಕೌಂಟ್ ನಲ್ಲಿ ತರಬೇಕಾ ಮೀಸಲಾತಿ ತಗೆದುಕೊಂಡರೂ ಹೆಡ್ ಕೌಂಟ್ ನಲ್ಲಿ ಬರಬೇಕು. 2 ಎ ದಲ್ಲಿರುವವರು ಲಿಂಗಾಯತ, ವೀರಶೈವ ಲಿಂಗಾಯತ ಎಂದು ಬರೆಸಿಲ್ಲ. ಇದರ ಆಚೆಯು ನಾನ್ ಲಿಂಗಾಯತ ಗಾಣಿಗ, ಸಾದರಿದ್ದಾರೆ ಅವರಿಗೂ ವ್ಯವಸ್ಥೆ ಮಾಡಬೇಕಾಗುತ್ತದ ಎಂದರು.