ಬೆಂಗಳೂರು: ಕಳೆದ ವಾರ ರಾಜ್ಯ ಸರ್ಕಾರಕ್ಕೆ ನೀಡಲಾದ ಜಾತಿಗಣತಿ ವರದಿ ಭಾರಿ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ. ಕೆಲ ಸಮುದಾಯಗಳು ಜಾತಿ ಗಣತಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆದೇ ಇಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಭಾರೀ ಕುತೂಹಲಕಾರಿ ಸಂಗತಿಯೊಂದು ಬಹಿರಂಗವಾಗಿದೆ.
ಅದೇನಂದರೆ, ಜಾತಿ ಸಮೀಕ್ಷೆ ವೇಳೆ ಜಾತಿ ಗುರುತಿಸಿಕೊಳ್ಳಲು ಲಕ್ಷಾಂತರ ಮಂದಿ ಹಿಂದೇಟು ಹಾಕಿದ್ದಾರಂತೆ. ಸಮೀಕ್ಷೆ ಕಾರ್ಯ ನಡೆಯುವ ವೇಳೆ ಜಾತಿಯನ್ನೇ ಹೇಳಲು ಇಚ್ಚಿಸಿಲ್ಲವಂತೆ.
ಹೌದು, ಜಾತಿಯೇ ಗೊತ್ತಿಲ್ಲ ಎಂದು 1,94,003 ಮಂದಿ ಹೇಳಿದ್ದಾರೆ. ಇನ್ನು ಜಾತಿ ಹೇಳಲು ನಿರಾಕರಿಸಿರುವ ಜನರ ಸಂಖ್ಯೆ ಕೂಡ 2,53,954. ಇದು ಕೂಡ ಜಾತಿ ಗಣತಿ ವರದಿಗೆ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಜಾತಿ ಹೇಳಲು ನಿರಾಕರಿಸಿದವರೆಷ್ಟು..
ಜಾತಿರಹಿತ ಎಂದು ಗುರುತಿಸಿಕೊಂಡಿರುವ- 1,34,319
ಜಾತಿಯೇ ಗೊತ್ತಿಲ್ಲ ಎಂದಿರುವವರು-1,94,003
ಜಾತಿ ಹೇಳಲು ನಿರಾಕರಿಸಿರುವವರು- 2,53,954
ಜಾತಿ ಗುರುತಿಸಲು ಸಾಧ್ಯವಾಗದವರು- 3755
ಇದು, ಸಿಎಂ ಸಿದ್ದರಾಮಯ್ಯ ಅವರ ಜಾತಿಗಣತಿ ಸಮೀಕ್ಷೆ ಕನಸಿಗೆ ಹಿಂದೇಟು ಆಗುವ ಸಾಧ್ಯತೆ ಇದೆ. ಈಗಾಗಲೇ ಪ್ರತಿಪಕ್ಷಗಳು ಸಮೀಕ್ಷೆ ವೀಜ್ಞಾನಿಕವಾಗಿಲ್ಲ ಎನ್ನುತ್ತಿರುವಾಗಲೇ ವರದಿಯಲ್ಲಿ ಉಲ್ಲೇಖವಾಗಿರುವ ಸಂಗತಿ ಸರ್ಕಾರಕ್ಕೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ.