ಬೆಂಗಳೂರು:- ವೇಶ್ಯವಾಟಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಬೆಂಗಳೂರಿನ ಸ್ಪಾ ಮೇಲೆ ಸಿಸಿಬಿ ದಾಳಿ ನಡೆಸಿದ್ದಾರೆ. ರಿಚ್ ಮಂಡ್ ಟೌನ್ ನಲ್ಲಿರುವ Pixies spa ಎಂಬಾ ಸ್ಪಾ ಮೇಲೆ ರೈಡ್ ನಡೆದಿದೆ.
ಇಸ್ರೇಲ್ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್: ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದೇನು?
ರೈಡ್ ಮಾಡಿದ ಸಂದರ್ಭದಲ್ಲಿ ಬಾಂಗ್ಲಾದೇಶದ ಯುವತಿ ಪತ್ತೆಯಾಗಿದ್ದು, ಡಿಂಪಲ್ ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶದ ಜಯಶೋರ್ ಜಿಲ್ಲೆಯ ಕುಲ್ನಾ ಎಂಬಾ ಪ್ರದೇಶಕ್ಕೆ ಯುವತಿ ಸೇರಿರುವ ಅನುಮಾನ ವ್ಯಕ್ತವಾಗಿದೆ. ಇನ್ನು ಕೂಡ ಸ್ಪಾನಲ್ಲಿ ಸಿಸಿಬಿ ಪೊಲೀಸರು, ಪರಿಶೀಲನೆ ಮಾಡಿದ್ದಾರೆ. ಎಸಿಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.