ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ Operation Sindoorಕ್ಕೆ ಕದನ ವಿರಾಮ ಬಿದ್ದಿದೆ. ಆದರೆ, ಕದನ ವಿರಾಮಕ್ಕೆ ಭಾರತ ಸಮ್ಮತಿ ಸೂಚಿಸಿರುವುದು ಪರ-ವಿರೋಧ ಚರ್ಚೆ ತಾರಕಕ್ಕೇರುವಂತೆ ಮಾಡಿದೆ.
ಈ ನಡುವೆ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕದನ ವಿರಾಮವನ್ನು ಸಮರ್ಥನೆ ಮಾಡಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಎನ್ನುವ ಬದಲಾಗಿ, ಪಾಕಿಸ್ತಾನಕ್ಕೆ ಮುಖಭಂಗ ಇದು. ಪಾಕಿಸ್ತಾನದ ಮೇಲೆ ಮುಂದಿನ ದಿನಗಳಲ್ಲಿ ಆಗುವ ಅನಾಹುತ ಅರಿತು
ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ. ಮಧ್ಯಸ್ಥಿಕೆ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ. ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಪಿಓಕೆ ವಿಚಾರದಲ್ಲಿ ನಾವು ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಇವತ್ತು ಸಹ ಯಾವುದೇ ಥರ್ಡ್ ಪಾರ್ಟಿ ನ ಮಧ್ಯಸ್ಥಿಕೆ ಇಟ್ಟುಕೊಳ್ಳಲು ಪ್ರಶ್ನೆಯೇ ಇಲ್ಲ. ನಮಗೆ ಶಕ್ತಿ ಇದೆ ಎಂದು ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ನೋಡೋಣ ಏನಾಗುತ್ತೆ ಅಂತ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಜಾರಿಕೊಂಡಿದ್ದಾರೆ.
ಕದನ ವಿರಾಮ ಬೇಡ..ವಾರ್ ಬೇಕು
ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರನ್ನು ಪೋಷಣೆ ಮಾಡುತ್ತಿರುವ ಪಾಕಿಸ್ತಾನದ ಮೇಲೆ ಯುದ್ಧ ನಡೆಯಬೇಕಿತ್ತು ಎಂಬ ಬಗ್ಗೆ ಎರಡೂ ರೀತಿಯ ಅಭಿಪ್ರಾಯ ಇದೆ. ಪಾಕಿಸ್ತಾನವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕಾದರೆ ಯುದ್ಧ ಆಗಬೇಕಿತ್ತು ಎಂಬುದು ಒಂದು ವರ್ಗದ ಜನರ ಅಭಿಪ್ರಾಯ. ನಮಗೆ ಆಗುವ ಪ್ರಾಣಹಾನಿ ಇರಬಹುದು. ನಮ್ಮ ಯೋಧರ ಪ್ರಾಣಹಾನಿ ವಿಚಾರ ಇರಬಹುದು. ನಾವು ನಮ್ಮ ಶಕ್ತಿ ಇದೆ ಅಂತ ಹೇಳಿ ದೊಡ್ಡ ಮಟ್ಟದಲ್ಲಿ ಇನ್ನೊಂದು ದೇಶದ ಮೇಲೆ ಗದಾಪ್ರಹಾರ ಮಾಡಿದ್ರೆ, ಉಕ್ರೇನ್ ಹಾಗೂ ರಷ್ಯಾ ದೇಶವನ್ನು ನೋಡ್ತಿದ್ದೇವೆ.
Operation Sindoor effect: ಕಾಂಗ್ರೆಸ್ ಸರ್ಕಾರದ 2 ವರ್ಷದ ಸಂಭ್ರಮಾಚರಣೆಗೆ ಬ್ರೇಕ್
ಎರಡೂ ದೇಶಗಳು ಯುದ್ದ ಮಾಡಿ ಏನ್ ಸಾಧನೆ ಮಾಡಿವೆ. ಇಲ್ಲಿ ಪಾಕಿಸ್ತಾನ ಪಾಠ ಕಲಿಯಬೇಕು. ವಿಶ್ವಕ್ಕೆ ಒಂದು ಸಂದೇಶವನ್ನು ಪ್ರಧಾನಿ ಮೋದಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಸಮರ್ಥನೆ ಮಾಡಿಕೊಂಡಿದ್ದಾರೆ.