ರೆಕಾರ್ಡ್, ರೆಕಾರ್ಡ್, ರೆಕಾರ್ಡ್ ಅಂತಾ ಹಳೆ ದಾಖಲೆಗಳೆಲ್ಲವನ್ನೂ ಧೂಳಿಪಟ ಮಾಡಿದ ಕೆಜಿಎಫ್ 2 ಸಿನಿಮಾಗೆ 3 ವರ್ಷದ ಸಂಭ್ರಮ. 1000 ಕೋಟಿ ಲೂಟಿ ಮಾಡಿ ಬಾಕ್ಸಾಫೀಸ್ ಅಂಗಳದಲ್ಲಿ ಹೊಸ ದಾಖಲೆ ಬರೆದ ಚಾಪ್ಟರ್ 2 ನಲ್ಲಿ ರಾಕಿ ವರ್ಸಸ್ ಅಧೀರನ ಕಾಳಗ ಎಲ್ಲರಿಗೂ ಥ್ರಿಲ್ ಕೊಟ್ಟಿತ್ತು. ಪ್ರಶಾಂತ್ ನೀಲ್ ಟೇಕಿಂಗ್, ಯಶ್ ಟೇಕಿಂಗ್ ಗೆ ಇಡೀ ಇಂಡಸ್ಟ್ರೀಗೆ ಸಲಾಂ ಹೊಡೆದಿತ್ತು. ಭಾರತೀಯ ಚಿತ್ರರಂಗದ ಹೊಸ ಇತಿಹಾಸ ಸೃಷ್ಟಿಸಿ ಕೆಜಿಎಫ್ 2ಗೆ 3 ವರ್ಷದ ಸಂಭ್ರಮದಲ್ಲಿ ಹೊಂಬಾಳೆ ಸ್ಪೆಷಲ್ ವಿಡಿಯೋ ರಿವೀಲ್ ಮಾಡಿದೆ. ಈ ವಿಡಿಯೋದಲ್ಲಿ ಸಿನಿಮಾಪ್ರೇಮಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೆಜಿಎಫ್ 3 ಬಗ್ಗೆ ಹೊಂಬಾಳೆ ಸುಳಿವು ಕೊಟ್ಟಿದೆ.
ಕೆಜಿಎಫ್ 2 ಸಿನಿಮಾಗೆ ಭರ್ತಿ 3 ವರ್ಷ ತುಂಬಿರುವ ಸಮಯದಲ್ಲಿ ಹೊಂಬಾಳೆ ಹಂಚಿಕೊಂಡಿರುವ ವಿಡಿಯೋದಲ್ಲಿ ಕೆಜಿಎಫ್ ಚಾಪ್ಟರ್ 3 ಬಗ್ಗೆ ಇಂಟ್ ಕೊಡಲಾಗಿದೆ. ಆದ್ರೆ ಸದ್ಯಕ್ಕೆ ಕೆಜಿಎಫ್ 3 ಬರೋದು ಅಸಾಧ್ಯ. ಯಾಕೆಂದರೆ ಪ್ರಶಾಂತ್ ನೀಲ್ ಜೂನಿಯರ್ ಎನ್ ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.ಅತ್ತ ಯಶ್ ಟಾಕ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ರಾಮಾಯಣ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಕೆಲಸಗಳು ಮುಗಿದ ಬಳಿಕೆ ಸಿನಿಮಾ ಟೇಕಾಫ್ ಆಗುವ ಸಾಧ್ಯತೆ ಇದೆ.
ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರದ ಹೈಲೈಟ್ಸ್. ಗಟ್ಟಿ ತಾಂತ್ರಿಕ ಬಳಗದ ಜತೆಗೆ ಘಟಾನುಘಟಿ ಪಾತ್ರವರ್ಗವನ್ನೂ ಹೊಂದಿರುವ ಈ ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸಹ ಮೋಡಿ ಮಾಡಿದ್ದರು.
ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಈ ಸಿನಿಮಾ ಹತ್ತಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿಯೂ ಹಾರಿಸಿದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ. ಇದೀಗ ಚಾಪ್ಟರ್ 3 ಮೇಲೆ ಸಿನಿ ಪ್ರಿಯರ ದೃಷ್ಟಿ ನೆಟ್ಟಿದೆ. ಅದರ ಬಗ್ಗೆಯೂ ಶೀಘ್ರದಲ್ಲಿ ಹೊಂಬಾಳೆ ಫಿಲಂಸ್ ಅಪ್ಡೇಟ್ ನೀಡಲಿದೆ.