ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ನರಮೇಧಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರು ಹಾಗೂ ಪಾಕಿಸ್ತಾನದ ವಿರುದ್ಧ ಭಾರತ ಮತ್ತಷ್ಟು ಕಠಿಣ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕು ಅನ್ನೋ ಕೂಗು ದೇಶಾದ್ಯಂತ ಜ್ವಾಲಾಮುಖಿಯಂತೆ ಪ್ರತಿಧ್ವನಿಸುತ್ತಿದೆ. ಇದರ ಬೆನ್ನಲ್ಲೇ ಪಾಕ್ ಹೈಕಮಿಷನ್‌ನ ಬಳಿ ಇಂದು ಬೆಳಗ್ಗೆ ವ್ಯಕ್ತಿಯೊಬ್ಬ ಕೇಕ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ರಿಡ್ಜ್ ನಲ್ಲಿ ಈ ಹಣ್ಣುಗಳನ್ನು ಇಡ್ತಿದ್ದೀರಾ!? ಇದರಿಂದ ದೇಹಕ್ಕಾಗುವ ಹಾನಿ ಎಷ್ಟು ಗೊತ್ತಾ!?
ಮಾಧ್ಯಮದ ವ್ಯಕ್ತಿಗಳು ಆ ವ್ಯಕ್ತಿಯನ್ನು ಸುತ್ತುವರಿದು, ಯಾಕೆ ಈ ಆಚರಣೆ? ಎಲ್ಲಿಗೆ ತಗೆದುಕೊಂಡು ಹೋಗಲಾಗುತ್ತದೆ ಎಂದು ಪ್ರಶ್ನಿಸಿದರು. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾನೆ.
ಪಾಕಿಸ್ತಾನ ಹೈಕಮಿಷನ್‌ನ ಉನ್ನತ ರಾಜತಾಂತ್ರಿಕ ಸಾದ್ ಅಹ್ಮದ್ ವಾರೈಚ್ ಅವರನ್ನು ಬುಧವಾರ ತಡರಾತ್ರಿ ಕೇಂದ್ರವು ಸಮನ್ಸ್ ಜಾರಿ ಮಾಡಿರುವ ಬಗ್ಗೆಯೂ ಅವರನ್ನು ಕೇಳಲಾಯಿತು. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದೇ ನಡೆದುಕೊಂಡು ಮುಂದೆ ಹೋಗಿದ್ದಾನೆ.
ಪಾಕ್ ಹೈಕಮಿಷನ್‌ಗೆ ನೀಡಲಾಗಿದ್ದ ಭದ್ರತೆಯನ್ನು ಈಗಾಗಲೇ ಭಾರತದ ಸರ್ಕಾರ ಕಡಿತ ಮಾಡಿದೆ. ಅಷ್ಟೇ ಅಲ್ಲದೇ 48 ಗಂಟೆಯ ಒಳಗಡೆ ಭಾರತದಲ್ಲಿರುವ ಸಾರ್ಕ್ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿರುವ ವ್ಯಕ್ತಿಗಳು ದೇಶವನ್ನು ತೊರೆಯಬೇಕು ಎಂದು ಸೂಚಿಸಿದೆ.