ಕನ್ನಡ ಚಿತ್ರರಂಗದ ಅಲಿಯಾ ಭಟ್ ಅಂತಾ ಕರೆಸಿಕೊಳ್ಳುವ ಚೈತ್ರಾ ಆಚಾರ್ ತಮ್ಮ ಅಭಿನಯದ ಜೊತೆಗೆ ಸೌಂದರ್ಯ ಮೂಲಕವೂ ಗಮನಸೆಳೆಯುತ್ತಾರೆ. ಅದ್ಭುತ ನಟಿಯಾಗಿರುವ ಚೈತ್ರಾ ಗಾಯಕಿಯಾಗಿಯೂ ಜನಪ್ರಿಯರು. ಕನ್ನಡದ ಜೊತೆಗೆ ಇತರ ಭಾಷೆಯಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ. ಸದ್ಯ ಮಿನಿ ಸ್ಕರ್ಟ್ ಧರಿಸಿ ಚೈತ್ರಾ ಆಚಾರ್ ಬೋಲ್ಡ್ ಅಂಡ್ ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಬಿಳಿ ಸ್ಕರ್ಟ್ ಅದಕ್ಕೆ ಒಪ್ಪುವ ಟಾಪ್ ಧರಿಸಿ ಚೈತ್ರಾ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಳು ಕಾಡ್ಗಿಚ್ಚು, ಬಳಿಕ ಬೆಳೆಯುವ ಹೂವು ಎಂಬ ನುಡಿಮುತ್ತಿನ ಜೊತೆಗೆ ತಮ್ಮ ಫೋಟೋ ಹಂಚಿಕೊಂಡಿದ್ದಾರೆ.
ಚೈತ್ರಾ ಆಚಾರ್ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿವೆ. ರಾಣಿ, ಬ್ಯೂಟಿಫುಲ್ ಅಂತೆಲ್ಲಾ ಕಮೆಂಟ್ ಗಳು ಸಿಕ್ಕಿವೆ. ಸದ್ಯ ಚೈತ್ರಾ, ತಮಿಳುನಟ ಶಶಿಕುಮಾರ್ ಜೊತೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಒಂದಷ್ಟು ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ಮಹಿರಾ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಚೈತ್ರಾ, ತಲೆದಂಡ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಳಿಕ ಬೇರೆ ಭಾಷೆಯಲ್ಲಿಯೂ ಬ್ಯುಸಿಯಾದರು.