ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕಳೆದೊಂದು ವಾರದಿಂದ ಡೆವಿಲ್ ಗಾಗಿ ರಾಜಸ್ಥಾನದಲ್ಲಿ ಬೀಡುಬಿಟ್ಟಿದ್ದ ದಾಸ ಇವತ್ತು ಪತ್ನಿ ಮಗನೊಂದಿಗೆ ಬೆಂಗಳೂರಿಗೆ ಬಂದಿಳಿದ್ದಾರೆ. ಬೆಂಗಳೂರಿನ ಕೇಂಪೇಗೌಡ ಏರ್ ಪೋರ್ಟ್ ಗೆ ಪತ್ನಿ ವಿಜಯಲಕ್ಷ್ಮೀ, ಮಗ ವಿನೇಶ್ ಒಟ್ಟಿಗೆ ದರ್ಶನ್ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ.
ಕಳೆದೊಂದು ವಾರದಿಂದ ಡೆವಿಲ್ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ರಾಜಸ್ಥಾನದ ಜೈಪುರದಲ್ಲಿ ನಡೆಸಲಾಗುತಿತ್ತು. ನಿನ್ನೆ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇವತ್ತು ದರ್ಶನ್ ಫ್ಯಾಮಿಲಿ ಸಮೇತ ಬೆಂಗಳೂರಿಗೆ ಆಗಮಿಸಿದ್ದಾರೆ. ಅತ್ತ ದರ್ಶನ್ ಜೈಪುರದಲ್ಲಿ ಶೂಟಿಂಗ್ ಕಣದಲ್ಲಿ ಬ್ಯುಸಿಯಾಗಿದರೆ ವಿಜಯಲಕ್ಷ್ಮೀ ರಾಜಸ್ಥಾನ ರೌಂಡ್ಸ್ ಹಾಕಿದ್ದ ಫೋಟೋವನ್ನು ಸೋಷಿಯಕಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಡೆವಿಲ್ ಸಿನಿಮಾಗೆ ಪ್ರಕಾಶ್ ವೀರ್ ಆಕ್ಷನ್ ಕಟ್ ಹೇಳುತ್ತಿದ್ದು, ದರ್ಶನ್ ಗೆ ಜೋಡಿಯಾಗಿ ರಚನಾ ರೈ ನಟಿಸುತ್ತಿದ್ದು, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ತಾರಾಬಳಗದಲ್ಲಿದ್ದಾರೆ. ಇನ್ನೂ ಡೆವಿಲ್ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಹೈದ್ರಾಬಾದ್ ನಲ್ಲಿ ನಡೆಯಲಿದೆ.