ಚಾಮರಾಜನಗರ:- ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್.ಬೆಟ್ಟ ವಲಯ ಹಿರಿಕೆರೆ ಅರಣ್ಯ ಪ್ರದೇಶದಲ್ಲಿ ಗಂಡು ಕಾಡಾನೆಯೊಂದರ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಒಂದು ವೇಳೆ ಯುದ್ಧ ನಡೆದರೆ ಇಂಗ್ಲೆಂಡ್ ಗೆ ಪಲಾಯನ ಆಗುತ್ತೇನೆ: ಪಾಕ್ ಮುಖಂಡ!
ಮೃತ ಗಂಡಾನೆಗೆ ಅಂದಾಜು 35 ರಿಂದ 40 ವರ್ಷ ವಯಸ್ಸಾಗಿದ್ದು, ಅರಣ್ಯ ಸಿಬಂದಿ ಜಿ.ಎಸ್.ಬೆಟ್ಟ ವಲಯದ ಹಂಗಳ ಸೌತ್ ಶಾಖೆಯ, ಸೋಮನಾಥಪುರ ಸ್ಯಾಂಡಲ್ ರಿಸರ್ವನ ಹಿರಿಕೆರೆ ಅರಣ್ಯ ಪ್ರದೇಶದ ಬಳಿ ಗಸ್ತು ತಿರುಗುತ್ತಿದ್ದಾಗ ಕಂಡು ಬಂದಿದೆ
ಕಾಡಾನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಲಾಖಾ ಪಶು ವೈದ್ಯಾಧಿಕಾರಿಯವರಿಂದ ಮರಣೋತ್ತರ ಶವ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದರು.
ಮರಣೋತ್ತರ ಪರೀಕ್ಷೆ ನಂತರ ಮೃತ ಕಾಡಾನೆಯ ಕಳೆಬರಹವನ್ನು ಅರಣ್ಯ ಇಲಾಖೆ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಜಿ.ಎಸ್.ಬೆಟ್ಟ ವಲಯ ಅರಣ್ಯಾಧಿಕಾರಿ ಮಲ್ಲೇಶ್, ವನ್ಯಜೀವಿ ಪರಿಪಾಲಕ ನಂಜುಂಡರಾಜೆ ಅರಸ್ ಹಾಗೂ ಸಿಬ್ಬಂಧಿಗಳು ಇದ್ರು