ಬೆಂಗಳೂರು: ಬಿಜೆಪಿ ಲೂಟಿ ಮಾಡಿದನ್ನ ಸರಿಪಡಿಸಲು ಕಾಲಾವಕಾಶ ಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಕಾಲದಲ್ಲಿ ಬೆಂಗಳೂರು ತೇಲುತ್ತಿತ್ತು. ಪ್ರಕೃತಿ ಮುನಿದಾಗ ಯಾರು ಏನು ಮಾಡೋಕೆ ಆಗಲ್ಲ.
ಬಿಜೆಪಿ ಲೂಟರ್ಸ್ ಮಾಡಿದ ಲೂಟಿ ಬಾಕಿ ಕೊಡಲು ಇನ್ನೂ ಮೂರು ವರ್ಷ ಬೇಕು. ಬಿಜೆಪಿ ಲೂಟಿ ಮಾಡಿದನ್ನ ಸರಿಪಡಿಸಲು ಕಾಲಾವಕಾಶ ಬೇಕು. ಸ್ಟ್ರಾಮಾಟರ್ ಲೈನ್‌ಗಳ ಮೇಲೆ ಮನೆ ನಿರ್ಮಾಣಕ್ಕೆ ಕಡಿವಾಣ ಹಾಕಬೇಕಿತ್ತು. ಅವರು ಕಡಿವಾಣ ಹಾಕಿಲ್ಲ, ಅದಕ್ಕೆ ಈ ರೀತಿ ಆಗಿದೆ ಎಂದರು.
ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ? ಎಣ್ಣೆ ಪ್ರಿಯರು ನೋಡಲೇಬೇಕಾದ ಸ್ಟೋರಿ!
ಇನ್ನೂ ಎಲ್ಲೆಲ್ಲಿ ನಿರಂತರವಾಗಿ ಗೆಲ್ಲುವ ಬಿಜೆಪಿ ಶಾಸಕರಿದ್ದಾರೆ. ಅವರ ಕ್ಷೇತ್ರದಲ್ಲೇ ಹೆಚ್ಚು ಈ ರೀತಿ ಅವಾಂತರ ಆಗಿದೆ. ಅವರು ಏನ್ ಲೂಟಿ ಮಾಡಿದ್ದಾರೆ ಅದನ್ನ ಹೇಳಬೇಕು.
ಬೆಂಗಳೂರಿನ ಅಭಿವೃದ್ದಿಗೆ ಸಿಎಂ ಹೆಚ್ಚಿನ ಅನುಧಾನವನ್ನ ಕೊಡುತ್ತಿದ್ದಾರೆ. ಬೆಂಗಳೂರಿಗೆ ಹೊಸ ರೂಪವನ್ನ ನಾವು ನೀವೆಲ್ಲಾ ನೋಡ್ತೀವಿ. ಬಿಜೆಪಿ ಶಾಸಕರು ನಿರಂತರವಾಗಿ ಗೆಲ್ಲುವ ಕ್ಷೇತ್ರಗಳಲ್ಲಿ ಇಂತಹ ಅವ್ಯವಸ್ಥೆ ಆಗ್ತಿದೆ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು.