ಬೆಂಗಳೂರು;- ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ಆಡಿರುವ 10 ಪಂದ್ಯದಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ RCB ಉತ್ತಮ ಫಾರ್ಮ್ ನಲ್ಲಿ ಇದೆ. ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದೆ.
SSLC RESULT : ಮದ್ದೂರು ತಾಲೂಕಿಗೆ ಪೂರ್ಣ ಪ್ರಜ್ಞಾ ಶಾಲಾ ವಿದ್ಯಾರ್ಥಿಗಳದ್ದೇ ಮೇಲುಗೈ
ಐಪಿಎಲ್ನ ಬದ್ಧವೈರಿಗಳ ಫೈಟ್ ನೋಡೋಕೆ, ಕ್ರಿಕೆಟ್ ಜಗತ್ತೇ ಕಾಯ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್ ಫೀಲ್ಡ್ನಲ್ಲಿ ನಡೆಯಲಿರೋ ಸೌತ್ ಇಂಡಿಯನ್ ಡರ್ಬಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಪ್ಲೇ ಆಫ್ ಎಂಟ್ರಿಗೆ ತುದಿಗಾಲಲ್ಲಿ ನಿಂತಿರೋ ಆರ್ಸಿಬಿ. ಕೇವಲ 2 ಪಂದ್ಯ ಗೆದ್ದು ಟೂರ್ನಿಯಿಂದ ಹೊರ ಬಿದ್ದಿರೋ ಚೆನ್ನೈ ಸೂಪರ್ ಕಿಂಗ್ಸ್. ಈ ಸೀಸನ್ನಲ್ಲಿ ಡಿಫರೆಂಟ್ ಆಟವಾಡಿರೂ ಎರಡೂ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ – ಸಿಎಸ್ಕೆ ಮುಖಾಮುಖಿಯಾಗ್ತಿದ್ದು, ಕ್ರಿಕೆಟ್ ವಲಯದಲ್ಲಿ ಹೈವೋಲ್ಟೆಜ್ ಕದನದ ಫೀವರ್ ಜೋರಾಗಿದೆ
ಈ ಸೀಸನ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಜೋಷ್ ಇದೆ. ಆರ್ಸಿಬಿ ತಂಡಕ್ಕೆ ಎದುರಾಳಿಗಳನ್ನ ಉಡಾಯಿಸೋ ತಾಖತ್ತಿದೆ. ತವರಿನ ಹೊರಗೆ ಅಜೇಯ ಓಟ ನಡೆಸ್ತಿರೋ ಆರ್ಸಿಬಿ, ತವರಿನಲ್ಲಿ ಸರಣಿ ಸೋಲಿಗೆ ಫುಲ್ ಸ್ಟಾಫ್ ಇಟ್ಟಿದೆ. ರಾಜಸ್ಥಾನ್ ಎದುರು ಹೋಮ್ಗ್ರೌಂಡ್ನಲ್ಲಿ ಮೊದಲ ಜಯ ಸಾಧಿಸಿರೋ ಬೋಲ್ಡ್ ಆರ್ಮಿಯಲ್ಲಿ ಗೆಲ್ಲೋ ಉತ್ಸಾಹ ಹೆಚ್ಚಿದೆ. ಹ್ಯಾಟ್ರಿಕ್ ಪಂದ್ಯ ಗೆದ್ದಿರುವ ಆತ್ಮವಿಶ್ವಾಸದಲ್ಲಿ ಇಂದು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಕಣಕ್ಕಿಳಿತಿರೋ ಆರ್ಸಿಬಿ ಗೆಲುವಿಗೆ ಪಣತೊಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫುಲ್ ಕಾನ್ಫಿಡೆಂಟ್ ಆಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗದಲ್ಲಿ ಫಸ್ಟ್ ಕ್ಲಾಸ್ ಪರ್ಫಾಮೆನ್ಸ್ ನೀಡ್ತಿದೆ. ಪಂದ್ಯದಿಂದ ಪಂದ್ಯಕ್ಕೆ ತಂಡದಲ್ಲಿ ಹೊಸ ಹೊಸ ಆಟಗಾರರು ಮ್ಯಾಚ್ ವಿನ್ನರ್ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಕೊಹ್ಲಿ, ಫಿಲ್ ಸಾಲ್ಟ್, ಪಡಿಕ್ಕಲ್, ಹೇಜಲ್ವುಡ್, ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಕನ್ಸಿಸ್ಟೆನ್ಸಿ ಕಾಯ್ದುಕೊಂಡಿದ್ದಾರೆ. ಕಳೆದ ಮೂರೂ ಪಂದ್ಯ ಗೆದ್ದು ಬೀಗಿರೋ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋ ತವಕದಲ್ಲಿದೆ.
ಕಳೆದುಕೊಳ್ಳೋದು ಏನೂ ಇಲ್ಲ.
ಈ ಸೀಸನ್ನಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್ ನೀಡಿರೋ ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ತಂಡವಾಗಿ ಸೀಸನ್ನಿಂದ ಔಟ್ ಆಗಿರೋ ಚೆನ್ನೈಗೆ ಈಗ ಕಳೆದುಕೊಳ್ಳೋದು ಏನೂ ಇಲ್ಲ. ಆರ್ಸಿಬಿಗೆ ಡ್ಯಾಮೇಜ್ ಮಾಡೋ ಅವಕಾಶವಿದೆ.