2025 ರ 25 ನೇ IPL ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಮಾಡಿ ಸಿಎಸ್ಕೆ ತಂಡವನ್ನು 103 ರನ್ಗಳಿಗೆ ಸೀಮಿತಗೊಳಿಸಿತು.
ಸಿಎಸ್ಕೆ ಪರ ಶಿವಂ ದುಬೆ ಗರಿಷ್ಠ 31 ರನ್ ಗಳಿಸಿದರು. ಕೆಕೆಆರ್ ಪರ ನರೈನ್ ಗರಿಷ್ಠ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು.
ಐಪಿಎಲ್ 2025 ರ 25 ನೇ ಪಂದ್ಯ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್ಕೆ ತಂಡದ ಸ್ಥಿತಿ ಈ ಸೀಸನ್ನಲ್ಲಿ ತುಂಬಾ ಕೆಟ್ಟದಾಗಿದೆ. ಆಡಿರುವ 5 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆದ್ದಿದೆ. ಇದರ ನಡುವೆ ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಮೊಣಕೈ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಮತ್ತೊಂದೆಡೆ, ಮೂರು ಬಾರಿ ಟ್ರೋಫಿ ವಿಜೇತ ಮತ್ತು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಕೂಡ ಇಲ್ಲಿಯವರೆಗೆ 5 ಪಂದ್ಯಗಳನ್ನು ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಆದ್ದರಿಂದ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಚೆಪಾಕ್ ಕೋಟೆಯನ್ನು ಮುರಿಯಲು ಕೆಕೆಆರ್ ಪ್ರಯತ್ನಿಸಲಿದೆ.