ಬೆಂಗಳೂರು/ ಹಾಸನ :- ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಂ.ಎನ್ ಕುಮಾರ್ ರನ್ನು ಚೆಕ್ಬೌನ್ಸ್ ಪ್ರಕರಣ ಪ್ರಕರಣದಲ್ಲಿ ನಗರದ ಉಪ್ಪಾರಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಂ.ಎನ್ ಕುಮಾರ್ ಅವರನ್ನು ಕೋರ್ಟ್ ಸೂಚನೆ ಮೇರೆಗೆ ಬುಧವಾರ ತಡರಾತ್ರಿ 2ಗಂಟೆ ಸುಮಾರಿಗೆ ಹಾಸನದಲ್ಲಿ ಬಂಧಿಸಿದ್ದಾರೆ. 1.25 ಕೋಟಿ ರೂ. ವಂಚಿಸಿರುವ ವಿಚಾರವಾಗಿ ಕೇಸ್ ದಾಖಲಾಗಿದ್ದು, ಸದ್ಯ ಎಂಎನ್ ಕುಮಾರ್ ಅವರನ್ನು ಮೆಡಿಕಲ್ ಟೆಸ್ಟ್ಗೆ ಕರೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಕನ್ನಡದ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರಗುರು, ಸೇರಿದಂತೆ ಹಲವು ಸಿನಿಮಾಗಳನ್ನು ಎಂ.ಎನ್ ಕುಮಾರ್ ನಿರ್ಮಿಸಿದ್ದಾರೆ.