ದೆಹಲಿ:- ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕುಕ್ಕರ್ ನಲ್ಲಿ ಅನ್ನ ಬೇಯಿಸ್ತಿರಾ? ಹಾಗಿದ್ರೆ ನೀವು ಓದಲೇಬೇಕಾದ ಸ್ಟೋರಿ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ, ಅವರು ಸಾರ್ವಜನಿಕವಾಗಿ ಮಾನಸಿಕ ಸ್ಥಿಮಿತ ಕಳೆದಕೊಂಡು ಒಬ್ಬ ಜವಾಬ್ದಾರಿಯುತ ಪೊಲೀಸ್ ಆಧಿಕಾರಿಯ ಮೇಲೆ ರೇಗಾಡುವುದು, ಚೀರಾಡುವುದು ಅವರ ಸ್ಥಾನಕ್ಕೆ ಶೋಭೆ ತರೋದಿಲ್ಲ ಎಂದರು.
ಬೆಳಗಾವಿಯಲ್ಲಿ ಅವರು ಭಾಷಣ ಮಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಆ ಸಂದರ್ಭವನ್ನು ಅವರು ಹಿಂದಿನ ಮುಖ್ಯಮಂತ್ರಿ ಜೆಹೆಚ್ ಪಟೇಲ್ ಅವರ ಹಾಗೆ ಸ್ಥಿತಪ್ರಜ್ಞರಾಗಿ ಸ್ವೀಕರಿಸಬೇಕಿತ್ತು, ಅದು ಬಿಟ್ಟು ಒಬ್ಬ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಕಪಾಳ ಮೋಕ್ಷ ಮಾಡಲು ಮುಂದಾಗಿದ್ದು ಸಿಎಂ ಮಾನಸಿಕ ಸಂತುಲನ ಕಳೆದುಕೊಳ್ಳುತ್ತಿರುವುದಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದರು.