ಚಿಕ್ಕಬಳ್ಳಾಪುರ : ಈಜು ಕಲಿಸಲು ಹೋಗಿ ತಂದೆ, ಮಗಳು ಇಬ್ಬರು ಸಾವು
ಚಿಕ್ಕಬಳ್ಳಾಪುರ : ತನ್ನ ಮಗಳಿಗೆ ಈಜು ಕಲಿಸಲು ಹೋಗಿ ತಂದೆ, ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಂದೆ ನಾಗೇಶ್ ಮಗಳಿಗೆ ಈಜು ಕಲಿಸಲು ಹೋಗಿದ್ದ ವೇಳೆ ಮೃತಪಟ್ಟಿದ್ದಾರೆ. ಕೆರೆಯಲ್ಲಿ ಹೂಳು ತುಂಬಿದ್ದರಿಂದ ಅಡಿಯಲ್ಲಿ ಸಿಲುಕಿ ತಂದೆ ನಾಗೇಶ್ (42) ಮಗಳು ಧನುಶ್ರೀ (12) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ಧನುಶ್ರೀ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಳು. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಿಡ್ಲಘಟ್ಟ ಶಾಸಕ ಬಿ ಎನ್ ರವಿಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.