ಚಿಕ್ಕೋಡಿ:- ಕರ್ನಾಟಕದಲ್ಲಿ ಈಗಾಗಲೇ ಹತ್ತನೇ ತರಗತಿ ಪರೀಕ್ಷೆ ಆರಂಭವಾಗಿದೆ. ಆದರೆ ಇಲ್ಲಿ ಮಾತ್ರ SSLC ಪರೀಕ್ಷೆಯಲ್ಲಿ ಬಾರಿ ನಕಲು ನಡೆಯುತ್ತಿದ್ದು, ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.
ಪರೀಕ್ಷಾ ಸಿಬ್ಬಂದಿಯಿಂದಲೇ ಪರೀಕ್ಷಾರ್ಥಿಗಳಿಗೆ ನಕಲು ಪೂರೈಕೆ ಮಾಡಲಾಗುತ್ತಿದ್ದು, ಸಿಸಿ ಕ್ಯಾಮೆರಾಗಳಿದ್ದರೂ ಸಿಬ್ಬಂದಿಗಳು ಕ್ಯಾರೇ ಎನ್ನುತ್ತಿಲ್ಲ. ಸಿ ಸಿ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ನಕಲು ಮಾಡಲಾಗುತ್ತಿದೆ. ಸ್ವತಃ ವಿದ್ಯಾರ್ಥಿಗಳಿಂದಲೇ ಕಾಫೀ ಮಾಡಿಸಿರುವ ಹೇಳಿಕೆ ಬಯಲಾಗಿದೆ. AIN ನ್ಯೂಸ್ ರಹಸ್ಯ ಕಾರ್ಯಚರಣೆಯಲ್ಲಿ ಮಾಹಿತಿ ಬಹಿರಂಗವಾಗಿದ್ದು, ಗಣಿತ ವಿಷಯ ಪರೀಕ್ಷೆ ಯಲ್ಲಿ ಸಿಬ್ಬಂದಿ ಮೌಖಿಕ ಉತ್ತರ ಹೇಳಿದ್ದು, 20ರಿಂದ್ 30 ಅಂಕದವರೆಗೆ ಮೌಖಿಕ ನಕಲು ಪೂರೈಕೆ ಮಾಡಲಾಗುತ್ತಿದೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಲಜಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ಜರುಗಿದೆ. “ನಕಲು ರಹಿತ ಪರೀಕ್ಷೆ” ಸರ್ಕಾರದ ಯೋಜನೆ ತಲೆ ಕೆಳಗಾಗಿದೆ. ಸರ್ಕಾರದ ಅಧಿಕಾರಿಗಳಿಂದಲೇ ನಕಲಿಗೆ ಕುಮ್ಮಕ್ಕು ದೊರತಿದೆ. ನಿಲಜಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಹಾ ಯಡವಟ್ಟು ಬಟಾ ಬಯಲಾಗಿದೆ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರಾ..? ಅನ್ನೋ ಅನುಮಾನ ಇದೀಗ ಮೂಡಿದೆ.ಬಿ. ಇ. ಓ ಆರ್ ಬಸವರಾಜಪ್ಪ, ಚಿಕ್ಕೋಡಿ DDPI ಮಾಡೋದಾದ್ರು ಏನು..? ಎಂಬ ಪ್ರಶ್ನೆ ಮೂಡಿದ್ದು ಕೂಡಲೇ ಪರೀಕ್ಷಾ ಕೇಂದ್ರದ ಎಲ್ಲಾ ಸಿಬ್ಬಂದಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಎಂ. ಕೆ. ಸಪ್ತಸಾಗರ,
AIN ನ್ಯೂಸ್ ಚಿಕ್ಕೋಡಿ