ಕೆಲಸ ಮಾಡಿದ ಗುತ್ತಿಗೆದಾರನಿಗೆ ಸರಿಯಾಗಿ ಬಿಲ್ ಮಾಡದೇ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ, ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಮುಗಳಖೊಡ ಪುರಸಭೆಯಲ್ಲಿ ಅಧಿಕಾರಿಗಳು ಮಾಡಿದ ಯಡವಟ್ಟು ಇದು..ದಲಿತ ಎಂಬ ಕಾರಣಕ್ಕೆ ಗುತ್ತಿಗೆದಾರನ ಮೇಲೆ ತಾತ್ಸಾರ ಮಾಡ್ತಾರೆ ಅಂತ ದಲಿತ ಕಂಟ್ರಾಕ್ಟರ್ ಸಂತೋಷ್ ಕಾಂಬ್ಳೆ ತಮ್ಮ ಅಳಳನ್ನು ತೋಡಿಕೊಂಡಿದ್ದಾರೆ.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
2023 ರಲ್ಲಿ ಗುತ್ತಿಗೆದಾರ ಸಂತೋಷ್ ಪುರಸಭೆ ನೀಡಿದ ಕೆಲಸ ಮಾಡಿದರೂ ಇಲ್ಲಿಯವರೆಗೂ ಮೋಟಾರ್ ಬಿಲ್ ಕೊಟ್ಟಿಲ್ಲ,
ಈ ಮಾನಗೇಡಿ ಇಂಜಿನಿಯರ್ S.R. ಚೌಗಲಾ ಗೆ ನೂರಾರು ಬಾರಿ ಬಿಲ್ ಹಾಕಲು ಕೇಳಿದರೂ ” ಅದು ಗ್ರಾಂಟ್ ಇಲ್ಲಾ ” ಅಂತಾ ಹಾರಿಕೆ ಉತ್ತರ ನೀಡಿ ಗುತ್ತಿಗೆದಾರನ ಮೊಬೈಲ್ ಸಂಖ್ಯೆ ಯನ್ನು “ಬ್ಲಾಕ್ಮೇಲಿಸ್ಟ್” ಗೆ ಅಟ್ಟಿದ್ದಾನೆ. ಇನ್ನೂ ಈ ಸಮಸ್ಸೆ ಕುರಿತಂತೆ ಪುರಸಭೆ ಮುಖ್ಯಧಿಕಾರಿ ಉದಯಕುಮಾರ ಘಟಕಾಂಬ್ಳೆ ಅವರನ್ನು ಕೇಳಿದ್ರೆ ಅವರಿಂದಲೂ ನಿರುತ್ತರದ ಸುರಿಮಳೆ
ಮಿಸ್ಟರ್ SR ಚೌಗಲಾ, ಮಿಸ್ಟರ್ ಉದಯಕುಮಾರ ನಿಮಗೆ ಕಿಂಚತ್ತು ಮಾನ ಮರ್ಯಾದೆ ಇದ್ರೆ ಗುತ್ತಿಗೆದಾರನಿಗೆ ಆದ ಅನ್ಯಾಯಕ್ಕೆ ಸ್ಪಂದಿಸಿ.. ಮುಂದಿನ ಅನಾಹುತ ತಪ್ಪಿಸಿ ಕೊಳ್ಳಿ..ಇಲ್ಲವಾದ್ರೆ ಖುರ್ಚಿ ಖಾಲಿ ಮಾಡಿ.
ಪ್ರಜ್ಞಾವಂತ ಪ್ರಜೆಗಳ ಹಕ್ಕುಗಳನ್ನೇ ನೀವು ಮಾರಣ ಹೋಮ ಮಾಡೋದಾದ್ರೆ.. ಸಾಮಾನ್ಯ ಪ್ರಜೆಗಳ ಗತಿ ಏನು..? ಸಂಧಪಟ್ಟ ಅಧಿಕಾರಿಗಳು ಜನಪ್ರತಿನಿದಿಗಳು ಇಂತಹ ಮತಿಗೆಟ್ಟ ಮಾನಗೇಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಜನಸಾಮಾನ್ಯರು ನಿಟ್ಟುಸಿರು ಬಿಡುವ ಕೆಲ್ಸ ಮಾಡಬೇಕಿದೆ ನಮ್ಮ AIN ನೊಂದವರ ಪರವಾಗಿ ಸಮರ ಸಾರಿದೆ.. ನ್ಯಾಯ ಸಿಗೋವರೆಗೂ ನಿರಂತರ ಹೋರಾಟ ನಮ್ಮದು
ವರದಿ:
ಎಂ. ಕೆ. ಸಪ್ತಸಾಗರ
AIN ನ್ಯೂಸ್ ಚಿಕ್ಕೋಡಿ